ಪೆಟ್ರೋಲ್ ಬೆಲೆ ಲೀಟರ್‌ಗೆ ಕೇವಲ 34 ರೂ, ಡೀಸೆಲ್ 38 ರೂ!

By Web DeskFirst Published Dec 22, 2018, 2:10 PM IST
Highlights

ಯಾವುದೇ ತೆರಿಗೆ ಮತ್ತು ಡೀಲರ್‌ ಕಮಿಷನ್‌ ಸೇರದಿದ್ದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಕೇವಲ 34.04 ರೂ. ಮತ್ತು 38.67 ರೂ ಆಗುತ್ತದೆ. ಹೀಗಂತ ಹೇಳಿದ್ದು ಬೇರಾರೂ ಅಲ್ಲ... ಖುದ್ದು ಕೆಂದ್ರವೇ ಈ ಲೆಕ್ಕವನ್ನು ನೀಡಿದೆ.

ನವದೆಹಲಿ[ಡಿ.22]: ಯಾವುದೇ ತೆರಿಗೆ ಮತ್ತು ಡೀಲರ್‌ ಕಮಿಷನ್‌ ಸೇರಿಸದಿದ್ದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ ಕೇವಲ 34ರೂಪಾಯಿ ಬೆಲೆ ನೀಡಬೇಕಗುತ್ತದೆ. ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿಚಾರವು ಸದ್ದು ಮಾಡಿದ ಸಂದರ್ಭದಲ್ಲಿ ಖುದ್ದು ಕೇಂದ್ರದ ರಾಜ್ಯ ಹಣಕಾಸು ಸಚಿವರೇ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಕೇಂದ್ರದ ರಾಜ್ಯ ಹಣಕಾಸು ಸಚಿವ ಶಿವಪ್ರತಾಪ್ ಶುಕ್ಲಾ ಒಂದು ಲೀಟರ್ ಪೆಟ್ರೋಲ್ ಮೇಲೆ ತೆರಿಗೆ ಹಾಗೂ ಕಮಿಷನ್ ಸೇರಿ ಶೇ. 96.9ರಷ್ಟು ವಿಧಿಸಲಾಗುತ್ತದೆ. ಡೀಸೆಲ್ ಮೇಲೆ ಶೇ. 60.3 ರಷ್ಟು ವಿಧಿಸಲಾಗುತ್ತದೆ ಎಂದಿದ್ದಾರೆ. ಈ ಲೆಕ್ಕಾಚಾರದ ಅನ್ವಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಅನುಕ್ರಮವಾಗಿ ಕೇವಲ 34.04 ರೂ. ಮತ್ತು 38.67 ರೂ. 
ಆಗುತ್ತದೆ.

ಇನ್ನು ಸರ್ಕಾರವು ದಿನೇ ದಿನೇ ಹೆಚ್ಚುತ್ತಿರುವ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಯ ಹೊರೆ ಇಳಿಸಲು, ಅಕ್ಟೋಬರ್‌ನಿಂದ ತೈಲದ ಮೇಲೆ ಹೇರಲಾಗುತ್ತಿದ್ದ ಅಬಕಾರಿ ತೆರಿಗೆಯನ್ನೂ ಹಿಂಪಡೆಯಲಾಗಿತ್ತು. ಪ್ರಶ್ನೋತ್ತರ ಸಮಯದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರಕ್ಕೆ ಪೆಟ್ರೋಲ್‌ ಮಾರಾಟದಿಂದ 73,516.80 ಕೋಟಿ ರೂ. ಅಬಕಾರಿ ಸುಂಕ  ಸಿಕ್ಕಿದೆ; ಡೀಸೆಲ್‌ ಮಾರಾಟದಿಂದ 1.5 ಲಕ್ಷ ಕೋಟಿ ರೂ. ಸಿಕ್ಕಿದೆ ಎಂದೂ ಸಚಿವರು ತಿಳಿಸಿದ್ದಾರೆ.

click me!