ದಲಿತ, ಮುಸ್ಲಿಂ, ಬಳಿಕ ಹನುಮಂತನಿಗೀಗ ಜಾಟ್ ಸಮುದಾಯದ ಪಟ್ಟ!

By Web DeskFirst Published Dec 22, 2018, 12:10 PM IST
Highlights

ಶ್ರೀಹನುಮಾನ್‌ಗೆ ಯುಪಿ ಸಚಿವರಿಂದ ಈಗ ಜಾಟ್‌ ಸಮುದಾಯದ ಟ್ಯಾಗ್‌!

ಲಖನೌ[ಡಿ.22]: ರಾಮಾಯಣದಲ್ಲಿ ಶ್ರೀರಾಮನ ಪರಮಭಕ್ತನಾದ ಹನುಮಂತನ ಯಾವ ಸಮುದಾಯಕ್ಕೆ ಸೇರಿದವರು ಎಂಬ ವಾದ-ವಿವಾದಗಳು ಸದ್ಯಕ್ಕೆ ಮುಗಿಯುವ ಸಾಧ್ಯತೆಗಳೇ ಕಾಣುತ್ತಿಲ್ಲ.

ಇತ್ತೀಚೆಗಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಬಿಜೆಪಿ ಮುಖಂಡರೊಬ್ಬರು ಆಂಜನೇಯ ದಲಿತ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಸಿಎಂ ಯೋಗಿ ಸಂಪುಟದ ಸದಸ್ಯರೊಬ್ಬರು, ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವ ಎಂದಿದ್ದಾರೆ.

Latest Videos

ಈ ಬಗ್ಗೆ ಶುಕ್ರವಾರ ಮಾತನಾಡಿದ ಉತ್ತರ ಪ್ರದೇಶದ ಧರ್ಮ ವ್ಯವಹಾರಗಳ ಸಚಿವ ಲಕ್ಷ್ಮಿ ನಾರಾಯಣ ಚೌಧರಿ, ‘ಜಾಟ್‌ ಸಮುದಾಯದವರು ಹನುಮಂತನ ಹಿನ್ನೆಲೆಯುಳ್ಳವರು. ಯಾಕೆಂದರೆ, ಆಂಜನೇಯ ಜಾಟ್‌ ಸಮುದಾಯದವರು,’ ಎಂದು ಹೇಳಿದ್ದಾರೆ.

click me!