
ಹುಬ್ಬಳ್ಳಿ(ಜು.13): ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪೆಟ್ರೋಲ್ ಬಂಕ್ ತೈಲ ಹಗರಣದ ಕಿಂಗ್ ಪಿನ್ ಹುಬ್ಬಳ್ಳಿಯಲ್ಲಿ ಸೆರೆಯಾಗಿದ್ದಾನೆ. ಬಂಕ್'ಗಳಲ್ಲಿ ತೈಲ ಕಳ್ಳತನದ ಚಿಪ್ ಅಳವಡಿಸಿ, ತೈಲ ಹಗರಣ ಮಾಡುತ್ತಿದ್ದ ಮಾಸ್ಟರ್ ಮೈಂಡ್ ಪ್ರಶಾಂತ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ನೂಲ್ಕರ್ ಥಾಣೆ ಪೊಲೀಸರು ಪ್ರಶಾಂತ್'ನನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.
ಈತ ಚೀನಾದಿಂದ ಚಿಪ್ ತರಿಸಿ ದೇಶವ್ಯಾಪಿ ಬಂಕ್ ಗಳಲ್ಲಿ ಅಳವಡಿಸುತ್ತಿದ್ದ. ಈ ಮೊದಲು ತೈಲ ವಿತರಿಸುವ ಯಂತ್ರ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಪ್ರಶಾಂತ್, ನಂತರ ಚೀನಾದಲ್ಲಿ ಲಭ್ಯವಿರುವ ಸಾಫ್ಟ್ ವೇರ್ ಚಿಪ್'ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ. ಬಳಿಕ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಒಪ್ಪಂದ ಕುದುರಿಸಿ, ಪೆಟ್ರೋಲ್, ಡೀಸಲ್ ವಿತರಿಸುವ ಯಂತ್ರಗಳಿಗೆ ಚಿಪ್ ಅಳವಡಿಸುತ್ತಿದ್ದ.
ಹೀಗೆ ಮಾಡಿದ ಬಳಿಕ ಯಂತ್ರಗಳ ಮೀಟರ್'ನಲ್ಲಿ ಯಾವುದೇ ವ್ಯತ್ಯಾಸ ಕಂಡುಬರುತ್ತಿರಲಿಲ್ಲ. ಪ್ರತಿ ಲೀಟರ್ ತೈಲಕ್ಕೆ 200 ಮಿ.ಲೀ ತೈಲ ವಿತರಣೆಯಾಗ್ತಿರಲಿಲ್ಲ. ಅಂದ್ರೆ 1ಲೀಟರ್ ಪೆಟ್ರೋಲ್ ಹಾಕಿಸಿಕೊಂಡ್ರೆ, ಗಾಡಿ ಟ್ಯಾಂಕರ್ ಸೇರ್ತಿದ್ದಿದ್ದು ಕೇವಲ 800 ಮಿ.ಲೀ ತೈಲ ಮಾತ್ರ. ಇನ್ನು ಈ ಹಗರಣದಲ್ಲಿ ಪ್ರಶಾಂತ್ ಜೊತೆ ಸಾಫ್ಟ್ ವೇರ್ ಇಂಜಿನಿಯರ್ ವಿವೇಕ್ ಶೆಟ್ಟಿ ಕೂಡ ಕೈಜೋಡಿಸಿದ್ದು, ಒಟ್ಟು 6 ಆರೋಪಿಗಳನ್ನ ಥಾಣೆ ಪೋಲೀಸ್ರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.