
ನವದೆಹಲಿ(ಆ.07): ಕಾಳಧನಿಕರೇ ಹುಷಾರ್.. ಸ್ವಿಸ್ ಬ್ಯಾಂಕು ಕಪ್ಪುಹಣ ಇಡಲು ಸುರಕ್ಷಿತ ಎಂದು ಭಾವಿಸಿ ಹಣ ಇಡಲು ಹೋದರೆ ಸಿಕ್ಕಿಬಿದ್ದೀರಿ.. ಹೌದು..ಕಾಳಧನಿಕರ ಸ್ವರ್ಗ ಎಂದೇ ಕುಖ್ಯಾತಿ ಪಡೆದಿರುವ ಸ್ವಿಜರ್ಲೆಂಡ್ ಕೊನೆಗೂ ಭಾರತಕ್ಕೆ ಕಾಳಧನಿಕರ ಮಾಹಿತಿ ನೀಡಲು ತೀರ್ಮಾನಿಸಿದೆ. ಈ ಸಂಬಂಧ ಭಾರತದ ಜತೆ ಸಹಿ ಹಾಕಿರುವ ‘ಸ್ವಯಂ ಚಾಲಿತ ಮಾಹಿತಿ ವಿನಿಮಯ ಒಪ್ಪಂದ’ಕ್ಕೆ ಅದು ಅಧಿಸೂಚನೆ ಜಾರಿ ಮಾಡಿದೆ.
ಈ ಪ್ರಕಾರ, ಇನ್ನು ಮೇಲೆ ಹಣ ಇಡುವವರ ಮಾಹಿತಿ ಸ್ವಯಂಚಾಲಿತವಾಗಿ ಭಾರತ ಸರ್ಕಾರಕ್ಕೆ ಲಭ್ಯವಾಗಲಿದೆ. ಆದರೆ ಹಣ ಇಟ್ಟವರ ಮಾಹಿತಿಯನ್ನು ಬಹಿರಂಗಪಡಿಸಕೂಡದು ಎಂದು ಭಾರತಕ್ಕೆ ಸ್ವಿಜರ್ಲೆಂಡ್ ಷರತ್ತು ವಿಧಿಸಿದೆ. ಭಾರತದಲ್ಲಿ ‘ದತ್ತಾಂಶ ಭದ್ರತೆ’ ಮತ್ತು ‘ಗೌಪ್ಯತೆ ರಕ್ಷಣೆ’ ಕಾನೂನುಗಳು ಬಲವಾಗಿದ್ದು, ಈ ಹಿನ್ನೆಲೆಯಲ್ಲಿ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಸೂಚನೆಯಲ್ಲಿ ಸ್ವಿಜರ್ಲೆಂಡ್ ಸರ್ಕಾರ ಹೇಳಿದೆ. ಆದರೆ ಸರ್ಕಾರದ ಮಟ್ಟದಲ್ಲಿ, ಸ್ವಿಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ ಭಾರತೀಯರ ವಿವರ ಲಭಿಸಲಿದ್ದು, ಅದರನ್ವಯ ಗೌಪ್ಯವಾಗಿಯೇ ಸರ್ಕಾರ ಕಾಳ‘ನಿಕರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದಾಗಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಇಟ್ಟ ಭಾರತೀಯರು, ಸರ್ಕಾರದ ಹದ್ದಿನ ಕಣ್ಣಿಗೆ ಬೀಳುವುದು ನಿಶ್ಚಿತವಾಗಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಪ್ರಮುಖ ಕಾರ್ಯಸೂಚಿಯು ಕಾಳ‘ನಿಕರ ಮಟ್ಟ ಹಾಕುವುದು ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಈ ಒಪ್ಪಂದವು ಮೋದಿ ಪಾಲಿಗೆ ದೊಡ್ಡ ಯಶಸ್ಸು ಎಂದು ವಿಶ್ಲೇಷಿಸಲಾಗಿದೆ. ಸ್ವಿಸ್ ಸರ್ಕಾರದೊಂದಿಗೆ ಮಾಡಿಕೊಂಡ ಈ ಒಪ್ಪಂದ ದಿಂದಾಗಿ ಇನ್ನು ಮುಂದೆ ಆ ದೇಶಕ್ಕೆ ಸೇರಿದ ಯಾವುದೇ ಬ್ಯಾಂಕ್‌ಗಳಲ್ಲಿ ತೆರಿಗೆ ವಂಚಿಸಿದ ಹಣ ಇಟ್ಟರೆ ಅದರ ಮಾಹಿತಿ ಭಾರತಕ್ಕೆ ರವಾನೆಯಾಗುತ್ತದೆ. ಈ ಹಿಂದೆ ಹಣ ಇಟ್ಟವರ ಯಾವುದೇ ಮಾಹಿತಿ ಭಾರತಕ್ಕೆ ಸಿಗುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.