
ಬೆಂಗಳೂರು(ಆ.07): ಕಳೆದ 9 ದಿನಗಳಿಂದ ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದ ಗುಜರಾತ್‌ನ ಕಾಂಗ್ರೆಸ್ ಶಾಸಕರು ತಡರಾತ್ರಿ ಗುಜರಾತ್‌ಗೆ ವಾಪಸ್ ಆಗಿದ್ದಾರೆ.
ಇದಕ್ಕೂ ಮುನ್ನ ರೆಸಾರ್ಟ್'ನಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಇದೇ ವೇಳೆ ರೆಸಾರ್ಟ್'ನಲ್ಲಿ ಅಣ್ಣ-ತಂಗಿಯ ಭಾಂದವ್ಯ ಅನಾವರಣವಾಯ್ತು. ಇಂದು ರಕ್ಷಾಬಂಧನವಾಗಿರುವುದರಿಂದ ಗುಜರಾತ್‌ನ ಮಹಿಳೆಯೊಬ್ಬರು ಡಿ.ಕೆ.ಶಿವಕುಮಾರ್ ಅವರಿಗೆ ರಾಖಿ ಕಟ್ಟುವ ಮೂಲಕ ಅಣ್ಣ -ತಂಗಿಯ ಭಾಂದವ್ಯಕ್ಕೆ ಸಾಕ್ಷಿಯಾದ್ರು.
ಕೇವಲ ಡಿ.ಕೆ.ಶಿವಕುಮಾರ್‌ಗೆ ಮಾತ್ರವಲ್ಲ. ಸಂಸದ ಡಿ.ಕೆ.ಸುರೇಶ್‌ಗೂ ರಾಖಿ ಕಟ್ಟುವ ಮೂಲಕ ಅಣ್ಣ-ತಂಗಿಯ ಭಾಂದವ್ಯ ತೋರಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.