
ಚಿತ್ರದುರ್ಗ(ಆ.07): ಜಿಲ್ಲೆಯತ್ತ ಮುಖ ಮಾಡವ ಪರಿಷತ್ ಸದಸ್ಯರ ವಿರುದ್ಧ ಆಕ್ರೋಶ, ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರನ್ನ ವೇಸ್ಟ್ ಬಾಡಿಗಳು ಎಂದ ಸಚಿವರು. ಮಿನಿಸ್ಟರ್ ಹೇಳಿಕೆಗೆ ವಿರುದ್ಧ ಭಜನೆ ಮಾಡಿದ ಕೈ ಕಾರ್ಯಕರ್ತರು. ಇದೆಲ್ಲಾ ನಡೆದದ್ದು ಕೋಟೆ ನಾಡು ಚಿತ್ರದುರ್ಗದಲ್ಲಿ.
ಮೈಸೂರು ಮೂಲದ ಉದ್ಯಮಿ ರಘು ಆಚಾರ್ ಈ ಹಿಂದೆ ಪರಿಷತ್ ಸ್ಥಾನಕ್ಕೆ ಕೋಟೆ ನಾಡು ಚಿತ್ರದುರ್ಗದಿಂದ ಸ್ಪರ್ಧೆ ಮಾಡಿ ಜಯಗಳಿಸಿದ್ರು. ಒಂದು ವರ್ಷ ಕಳೆದರೂ ಅತ್ತ ತಲೆ ಹಾಕದ ರಘು ಆಚಾರ್ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ರು. ಈ ವೇಳೆ ಎಂಎಲ್‌ಸಿ ವಿರುದ್ದ ತಿರುಗಿ ಬಿದ್ದ ಕಾಂಗ್ರಸ್ ಯುವ ಮುಖಂಡರುಗಳು ಹಿಗ್ಗಾಮಗ್ಗಾ ತರಾಟೆ ತೆಗೆದುಕೊಂಡ್ರು. ಈ ಬಗ್ಗೆ ಹಿರಿಯೂರಿನಲ್ಲಿಪ್ರತಿಕ್ರಯಿಸಿದ ಸಚಿವ ಆಂಜನೇಯ ಕಾಂಗ್ರಸ್ ಕಚೇರಿಯಲ್ಲಿ ಗಲಾಟೆ ಮಾಡಿರೋರೆಲ್ಲಾ ವೇಸ್ಟ್ ಬಾಡಿಗಳು ಅಂದ್ರು
ಇನ್ನೂ ಆಂಜನೇಯ ಅವರ ವೇಸ್ಟ್ ಬಾಡಿಗಳು ಅನ್ನೋ ಮಾತು ಕೇಳಿ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗದ ಜಿಲ್ಲಾ ಕಾಂಗ್ರಸ್ ಕಚೇರಿ ಬಳಿ ದಂಡಪಿಂಡಗಳು ನಾವು ವೇಸ್ಟು ಬಾಡಿಗಳು ಅಂತಾ ಭಜನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ರಘು ಆಚಾರ್ ಮಾತ್ರ ನನ್ನ ವಿರುದ್ಧ ಯಾರೂ ಮಾತನಾಡಲೇ ಇಲ್ಲ ಎಂದರು.
ಒಟ್ಟಾರೆಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಈಗಾಗಲೇ ಭಿನ್ನ ಮತ ಶುರುವಾಗಿದ್ದು ಪ್ರಭಾವಿ ಮುಖಂಡರ ನಡೆ ಒಂದಾದ್ರೆ ಕಾರ್ಯಕರ್ತರ ನಡೆ ಮತ್ತೊಂದು ಅನ್ನುಂತಿದೆ. ಇದನ್ನೆಲ್ಲಾ ನೋಡಿದ್ರೆ ಮುಂಬರುವ ಚುನಾವಣೆ ವೇಳೆಗೆ ಕಾಂಗ್ರೆಸ್‌ನ ಸ್ಥಿತಿ ಏನಾಗಬಹುದೋ ಅಂತ ಕಾಂಗ್ರೆಸ್ ನ ಕಟ್ಟಾ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.