(Video)ವಿವಾದ ಸೃಷ್ಟಿಸಿತು ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂನಲ್ಲಿ ಹಾರಿಸಿದ ಈ ಶಾಲು!

By Suvarna Web DeskFirst Published Aug 17, 2017, 2:42 PM IST
Highlights

ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ವಿದೇಶದಲ್ಲೇ ಹೆಚ್ಚಿರುತ್ತಾರೆ, ಭಾರತದಲ್ಲಿ ಅವರು ಇರುವುದು ಅತಿ ವಿರಳವಾಗಿದೆ. ಹಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಪ್ರಿಯಾಂಕಾ ಚೋಪ್ರಾಳ ಕೈಯ್ಯಲ್ಲಿ ಸದ್ಯ 2 ಪ್ರಾಜೆಕ್ಟ್'ಗಳಿವೆ.  ಆಗಸ್ಟ್ 15ರಂದು ದೇಶವಿಡೀ 71ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುತ್ತಿದ್ದರೆ, ಅತ್ತ ಪ್ರಿಯಾಂಕಾ ಚೋಪ್ರಾ ಇನ್ಸ್ಟಾ ಗ್ರಾಂನಲ್ಲಿ ವಿಡಿಯೋವೊಂದನ್ನು ಸೇರ್ ಮಾಡಿದ್ದಾರೆ. ಆದರೆ ಇದೀಗ ಈ ವಿಡಿಯೋ ಒಂದು ವಿವಾದ ಸೃಷ್ಟಿಸಿದೆ. ಅಷ್ಟಕ್ಕೂ ವಿವಾದ ಸೃಷ್ಟಿಸುವಂತಹುದ್ದು ಆ ವಿಡಿಯೋದಲ್ಲೇನಿತ್ತು ಅಂತೀರಾ? ಇಲ್ಲಿದೆ ನೋಡಿ ವಿವರ

ನವದೆಹಲಿ(ಆ.17): ಸ್ವಾತಂತ್ರ್ಯೋತ್ಸವದಂದು ಪ್ರಿಯಾಂಕಾ ಚೋಪ್ರಾ ಕೂಡಾ ತನ್ನ ಇನ್ಸಾಗ್ರಾಂನಲ್ಲಿ ತ್ರಿವರ್ಣ ಧ್ವಜದಲ್ಲಿರುವ ಬಣ್ಣಗಳಿಂದ ಕೂಡಿದ ಶಾಲೊಂದನ್ನು ಕುತ್ತಿಗೆಗೆ ಹಾಕಿ, ಪ್ರೀತಿಯಿಂದ ಹಾರಿಸುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಕೆಲವರು ಈ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿ, ಪ್ರಿಯಾಂಕಾ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಧ್ವನಿ ಎತ್ತಿದ್ದಾರೆ.

ಅಶೋಕ ಚಕ್ರವಿಲ್ಲದೇ ತ್ರಿವರ್ಣ ಧ್ವಜವಿರುವುದಿಲ್ಲ ಎಂದು ಕೆಲವರು ಆಕ್ಷೇಪವೆತ್ತಿದ್ದರೆ ಮತ್ತೆ ಕೆಲವರು ಇದೆಲ್ಲವೂ ಪ್ರಿಯಾಂಕಾ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಂತೂ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂಬ ಆರೋಪ ಹೊರಿಸಿದ್ದಾರೆ. ಅಲ್ಲದೇ ಅವರ ದೇಶಭಕ್ತಿಯ ಮೇಲೂ ಜನರು ಬೊಟ್ಟು ಮಾಡಿದ್ದಾರೆ ಹಾಗೂ ಅವರು ಈ ವಿಚಾರಕ್ಕಾಗಿ ಕ್ಷಮೆ ಯಾಚಿಸಬೇಕೆಂದು ಕೇಳಿಕೊಂಡಿದ್ದಾರೆ.

 

Independence Day #Vibes 🇮🇳#MyHeartBelongsToIndia #happyindependencedayindia #jaihind

A post shared by Priyanka Chopra (@priyankachopra) on Aug 14, 2017 at 6:17pm PDT

ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುವ ಹಕ್ಕು ಎಲ್ಲರಿಗೂ ಇದೆ. ಪ್ರಿಯಾಂಕಾ ಕೂಡಾ ಈ ರೀತಿ ಆಚರಿಸಿದ್ದಾರೆ ಆದರೆ ಜನರು ಮಾತ್ರ ಈ ವಿಚಾರದಲ್ಲೂ ತಪ್ಪು ಹುಡುಕುವಲ್ಲಿ ಎಡವಿಲ್ಲ.

click me!