
ಮಂಗಳೂರು(ಜು.17): ತಿರುವನಂತಪುರಂ ಸೂಪರ್ ಫಾಸ್ಟ್ ಎಕ್ಸ್'ಪ್ರೆಸ್ ರೈಲಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಈ ಕುರಿತಾಗಿ ದೂರು ನೀಡಲು ತೆರಳಿದ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದ ಉತ್ತರ ನೀಡಿರುವ ಪ್ರಕರಣ ನಡೆದಿದೆ.
ತಿರುವನಂತಪುರಂ ಸೂಪರ್ ಫಾಸ್ಟ್ ಎಕ್ಸ್'ಪ್ರೆಸ್ ರೈಲಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಒಂದೆಡೆ ರೈಲಿನ ಒಳಗೆ ಸಿಗರೇಟ್ ಹಾಗೂ ಮದ್ಯ ಮಾರಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕಳ್ಳನೊಬ್ಬ ಚಿನ್ನದ ಸರ ಎಳೆದೊಯ್ಯುವ ಪ್ರಯತ್ನ ಮಾಡಿದ್ದಾನೆ. ಇಷ್ಟು ಸಾಲದು ಎಂಬಂತೆ ಎರಡು ದಿನಗಳಿಂದ ಈ ರೈಲಿನಲ್ಲಿ ಟಿಸಿ ಕೂಡಾ ಕಾಣಿಸಿಕೊಂಡಿಲ್ಲ.
ಇನ್ನು ನೊಂದ ಪ್ರಯಾಣಿಕರು ಈ ಕುರಿತಾಗಿ ರೈಲ್ವೇ ಇಲಾಖೆಗೆ ದೂರು ನೀಡಲು ತೆರಳಿದರೆ, ಆರ್ ಪಿಎಫ್ ಪೊಲೀಸರು ಪ್ರಯಾಣಿಕರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ರೈಲ್ವೇ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಬೇಸತ್ತ ಪ್ರಯಾಣಿಕರು ಮಹಾರಾಷ್ಟ್ರದಲ್ಲಿ ರೈಲು ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.