ಡಿಐಜಿ ರೂಪಾ ತಮ್ಮ ವರದಿಯಲ್ಲಿ ಮಾಡಿದ 9 ಆರೋಪಗಳೇನು?

By Suvarna Web DeskFirst Published Jul 17, 2017, 2:48 PM IST
Highlights

ಇಡೀ ದೇಶವನ್ನೇ ಸಂಚಲನ ಮೂಡಿಸಿದ ರೂಪಾ ಅವರ ವರದಿಯಲ್ಲಿ ಅಂಥದ್ದೇನಿದೆ? ಡಿಜಿಪಿ ಸತ್ಯನಾರಾಯಣ ರಾವ್ ಉರಿದುಬೀಳುವಂತೆ ಮಾಡಿದ ಅವರ 9 ಆರೋಪಗಳೇನು?

ಬೆಂಗಳೂರು(ಜುಲೈ 17): ಬಂದೀಖಾನೆ ಇಲಾಖೆಯಾಗಿದ್ದ ಡಿಐಜಿ ರೂಪಾ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿನ ಕೇಂದ್ರ ಕಾರಾಗೃಹದ ಅವ್ಯವಸ್ಥೆಯ ಬಗ್ಗೆ ಅವರು ನೀಡಿದ ವರದಿಯ ಫಲಶ್ರುತಿ ಇದು. ಇಡೀ ದೇಶವನ್ನೇ ಸಂಚಲನ ಮೂಡಿಸಿದ ರೂಪಾ ಅವರ ವರದಿಯಲ್ಲಿ ಅಂಥದ್ದೇನಿದೆ? ಡಿಜಿಪಿ ಸತ್ಯನಾರಾಯಣ ರಾವ್ ಉರಿದುಬೀಳುವಂತೆ ಮಾಡಿದ ಅವರ 9 ಆರೋಪಗಳೇನು?

ರೂಪಾ ತಮ್ಮ ವರದಿಯಲ್ಲಿ ಮಾಡಿರುವ 9 ಆರೋಪಗಳು(ಸಂಕ್ಷಿಪ್ತ ಅಂಶಗಳು):

ಆರೋಪ 1:
ಜೈಲಿನಿಂದ ಹೊರಗಡೆ ಚಿಕಿತ್ಸೆಗೆ ಸೂಚಿಸುವಂತೆ ವೈದ್ಯರಿಗೆ ಕೈದಿಗಳಿಂದ ಜೀವ ಬೆದರಿಕೆ

ಆರೋಪ 2:
ಔಷಧಾಲಯಕ್ಕೆ ಕೈದಿಗಳ ನಿಯೋಜನೆ, ಅವರಿಂದಲೇ ನಿದ್ರೆ ಮಾತ್ರೆಗಳ ದುರುಪಯೋಗ

ಆರೋಪ 3:
ಜೂನ್​ 23ರಂದು ನರ್ಸ್​ಗೆ ಕಿರುಕುಳ ಕೊಟ್ಟ ಕೈದಿ ಮೇಲೆ ಕ್ರಮ ಕೈಗೊಂಡಿಲ್ಲ

ಆರೋಪ 4:
ಜೂನ್‌ 29ರಂದು ಕಾರಾಗೃಹದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಸಂಬಂಧ ಕ್ರಮ ಕೈಗೊಂಡಿಲ್ಲ

ಆರೋಪ 5:
ಕೈದಿಗಳು ದಾಖಲೆ ಕೊಠಡಿಯಲ್ಲಿ ಕೆಲಸ ಮಾಡುತ್ತಿರುವುದು, ಕೈದಿಗಳಿಂದ ದಾಖಲೆಗಳ ದುರ್ಬಳಕೆ

ಆರೋಪ 6:
ಜೈಲಿಗೆ ಭೇಟಿ ನೀಡುತ್ತಿರುವುದನ್ನು ಪ್ರಶ್ನಿಸುತ್ತಿರುವುದು

ಆರೋಪ 7:
ಜೈಲಿನಲ್ಲಿ ಗಾಂಜಾ ಬಳಕೆಯನ್ನು ತಡೆಯುವಲ್ಲಿ ವಿಫಲ. 25 ಕೈದಿಗಳ ಪೈಕಿ 18 ಜನರಲ್ಲಿ ಗಾಂಜಾ ಅಂಶ

ಆರೋಪ 8:
ತೆಲಗಿ ಐಷಾರಾಮಿ ಸೌಲಭ್ಯ ಪಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು

ಆರೋಪ 9:
ವಿಶೇಷ ಆತಿಥ್ಯ ನೀಡಲು ಶಶಿಕಲಾರಿಂದ 2 ಕೋಟಿ ಲಂಚ ಪಡೆದಿರುವುದು.

click me!