ಅನವಶ್ಯಕ ವಿದ್ಯುತ್‌ ಕಡಿತ ಮಾಡಿದ್ರೆ ಬೀಳುತ್ತೆ ದಂಡ!

First Published Jun 1, 2018, 11:26 AM IST
Highlights

ಅನವಶ್ಯಕವಾಗಿ ವಿದ್ಯುತ್‌ ಕಡಿತಗೊಳಿಸಿದರೆ ಪೂರೈಕೆದಾರ ಕಂಪನಿಗಳು ಗ್ರಾಹಕರಿಗೆ ದಂಡ ಕಟ್ಟಿಕೊಡಬೇಕು.. ವಿದ್ಯುತ್‌ ಪೂರೈಕೆ ಸಬ್ಸಿಡಿಯು ವೆಚ್ಚದ ಶೇ.20ನ್ನು ಮೀರುವಂತಿಲ್ಲ.. ಇತ್ಯಾದಿ ಮಹತ್ವದ ಅಂಶಗಳುಳ್ಳ ‘ರಾಷ್ಟ್ರೀಯ ವಿದ್ಯುತ್‌ ದರ ನೀತಿ-2017’ರ ತಿದ್ದುಪಡಿ ಕರಡು ನಿಯಮಗಳನ್ನು ವಿದ್ಯುತ್‌ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದೆ.

ನವದೆಹಲಿ (ಜೂ. 01): ಅನವಶ್ಯಕವಾಗಿ ವಿದ್ಯುತ್‌ ಕಡಿತಗೊಳಿಸಿದರೆ ಪೂರೈಕೆದಾರ ಕಂಪನಿಗಳು ಗ್ರಾಹಕರಿಗೆ ದಂಡ ಕಟ್ಟಿಕೊಡಬೇಕು.. ವಿದ್ಯುತ್‌ ಪೂರೈಕೆ ಸಬ್ಸಿಡಿಯು ವೆಚ್ಚದ ಶೇ.20ನ್ನು ಮೀರುವಂತಿಲ್ಲ.. ಇತ್ಯಾದಿ ಮಹತ್ವದ ಅಂಶಗಳುಳ್ಳ ‘ರಾಷ್ಟ್ರೀಯ ವಿದ್ಯುತ್‌ ದರ ನೀತಿ-2017’ರ ತಿದ್ದುಪಡಿ ಕರಡು ನಿಯಮಗಳನ್ನು ವಿದ್ಯುತ್‌ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದೆ.

ಈ ತಿದ್ದುಪಡಿ ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಜೂನ್‌ 20ರವರೆಗೆ ಅವಕಾಶ ನೀಡಲಾಗಿದೆ.

ಇದೇ ವೇಳೆ ಗ್ರಾಹಕರಿಗೆ ವಿದ್ಯುತ್‌ ದರದಲ್ಲಿ ಸಬ್ಸಿಡಿ ನೀಡಬೇಕು ಎಂದರೆ ಅದನ್ನು ಗ್ರಾಹಕರಿಗೆ ನೇರ ನಗದು ವರ್ಗಾವಣೆ ಆಧಾರದಲ್ಲಿ ನೀಡಬೇಕು ಎಂಬುದೂ ಕರಡು ನಿಯಮದಲ್ಲಿದೆ.

ಅನಿವಾರ್ಯ ಕಾರಣಗಳು, ತಾಂತ್ರಿಕ ತೊಂದರೆಗಳನ್ನು ಹೊರತುಪಡಿಸಿ ಇತರ ಕಾರಣಗಳಿಗೆ ಬೇಕಾಬಿಟ್ಟಿಪವರ್‌ ಕಟ್‌ ಮಾಡಿದರೆ ಅದಕ್ಕೆ ನಿಯಂತ್ರಣ ಪ್ರಾಧಿಕಾರ ವಿಧಿಸಿದ ನಿಯಮಗಳ ಅನ್ವಯ ಪೂರೈಕೆದಾರ ಡಿಸ್ಕಾಂಗಳು ದಂಡ ತೆರಬೇಕು. ದಂಡವನ್ನು ಗ್ರಾಹಕರ ಖಾತೆಗೆ ಜಮಾ ಮಾಡಬೇಕು ಎಂದು ತಿಳಿಸಲಾಗಿದೆ. 

click me!