
ನವದೆಹಲಿ(ನ.2): ನೌಕರನು ಸಾವಿಗೀಡಾದರೆ 7 ದಿನಗಳ ಒಳಗಾಗಿ ಆತನ ಡೆತ್ ಕ್ಲೈಮ್(ಮರಣಾನಂತರ ಸಿಗುವ ಭವಿಷ್ಯ ನಿಯ ಮೊತ್ತ) ಅನ್ನು ಪಾವತಿಸಬೇಕು ಹಾಗೂ ನಿವೃತ್ತಿಯ ಪ್ರಕರಣಗಳನ್ನು ಆತ ಕೆಲಸದಿಂದ ನಿವೃತ್ತಿಯಾಗುವ ಮೊದಲೇ ಇತ್ಯರ್ಥಗೊಳಿಸಬೇಕು ಎಂಬ ಮಾರ್ಗಸೂಚಿಗಳನ್ನು ನೌಕರರ ಭವಿಷ್ಯ ನಿ ಸಂಸ್ಥೆ(ಇಪಿಎಫ್)ಯು ಹೊರಡಿಸಿದೆ. ಅ.26ರಂದು ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ನಿರ್ದೇಶನದ ಅನ್ವಯ, ನಿವೃತ್ತಿ ಹಾಗೂ ಸಾವಿನ ಪ್ರಕರಣಗಳಿಗೆ ಸಂಬಂಸಿ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಕೇಂದ್ರ ಭವಿಷ್ಯ ನಿ ಆಯುಕ್ತರು ಮಾಹಿತಿ ನೀಡಿದ್ದಾರೆ. ಎಲ್ಲ ಕ್ಷೇತ್ರ ಅಕಾರಿಗಳಿಗೆ ಈ ಕುರಿತ ಸುತ್ತೋಲೆ ರವಾನಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.