ಸಬ್ಸಿಡಿ ಸಿಲಿಂಡರ್ ದರ ಹೆಚ್ಚಳ

By Suvarna Web DeskFirst Published Nov 1, 2016, 6:33 PM IST
Highlights

ಡೀಲರ್ಗಳಿಗೆನೀಡಲಾಗುವಕಮಿಷನ್ನಲ್ಲಿಹೆಚ್ಚಳಮಾಡಿದ್ದರಿಂದಕ್ರಮಕೈಗೊಳ್ಳಲಾಗಿದೆ. ಇದರಿಂದಾಗಿನವದಹಲಿಯಲ್ಲಿ 14.2 ಕೆಜಿತೂಕದಸಬ್ಸಿಡಿಸಹಿತಅಡುಗೆಅನಿಲಸಿಲಿಂಡರ್ಬೆಲೆರೂ. 430.64 ಆಗಲಿದೆ.

ನವದೆಹಲಿ(ನ.2): ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ದರವನ್ನು 38ರಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ ಈಗ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 2 ಏರಿಕೆ ಮಾಡಲಾಗಿದೆ.

ಡೀಲರ್‌ಗಳಿಗೆ ನೀಡಲಾಗುವ ಕಮಿಷನ್‌ನಲ್ಲಿ ಹೆಚ್ಚಳ ಮಾಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ನವದಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 430.64 ಆಗಲಿದೆ. ದರ ಏರಿಕೆಯಾಗುವ ಮೊದಲು 428.59 ಆಗಿತ್ತು. ಜುಲೈ ಬಳಿಕ ಇದು ಆರನೇ ಏರಿಕೆಯಾಗಿದೆ. ಯುಪಿಎ ಸರ್ಕಾರ ಮಾರುಕಟ್ಟೆಗೆ ಅನುಗುಣವಾಗಿ ಡೀಸೆಲ್ ದರ ಪರಿಷ್ಕರಣೆಗೆ ಅವಕಾಶ ಮಾಡಿತ್ತು. ಅದೇ ನಿಯಮವನ್ನು ಎಲ್‌ಪಿಜಿ ಮತ್ತು ಸೀಮೆ ಎಣ್ಣೆ ಬೆಲೆಗೂ ಅನುಸರಿಸಲಾಗಿದೆ.

click me!