ಸಂಚಾರಿ ಪೊಲೀಸರ ವಿನೂತನ ಪ್ರಯೋಗ;ಸ್ಕೈವಾಕರ್ ಸೆಲ್ಫಿ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ

By Suvarna Web DeskFirst Published Apr 4, 2017, 4:24 PM IST
Highlights

ಐಟಿ ಬಿಟಿ ಸಿಟಿ ಬೆಂಗಳೂರಲ್ಲಿ  ಟ್ರಾಫಿಕ್ ಕಂಟ್ರೋಲ್ ಮಾಡೋದೆ ಒಂದು ದೊಡ್ಡ ಸವಾಲು. ಅಪಘಾತಗಳ ಸಂಖ್ಯೆ ಕೂಡ ಕಡಿಮೆ ಆಗ್ತಾನೆ ಇಲ್ಲ. ಹೀಗಾಗಿ ನಗರದಲ್ಲಿ ಹೆಚ್ಚು ಹೆಚ್ಚು ಸ್ಕೈವಾಕರ್ ಗಳು ಆಗ್ಬೇಕು ಅನ್ನೋದು ಜನರ ಕೂಗು.  ವಿಪರ್ಯಾಸ ಅಂದ್ರೆ, ಸದ್ಯ ಇರೋ ಸ್ಕೈವಾಕರ್​ಗಳ ಬಳಕೆಯೇ ಆಗುತ್ತಿಲ್ವಂತೆ. ಹೀಗಾಗಿ ನಾಗರೀಕರು ಸ್ಕೈವಾಕರ್ ಬಳಸುವಂತೆ ಸಂಚಾರಿ ಪೊಲೀಸ್ರು ವಿನೂತನ ಸೆಲ್ಫಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಏನದು ಅಂತೀರಾ ಈ ಸ್ಟೋರಿ ನೋಡಿ.

ಬೆಂಗಳೂರು (ಏ.04):  ಐಟಿ ಬಿಟಿ ಸಿಟಿ ಬೆಂಗಳೂರಲ್ಲಿ  ಟ್ರಾಫಿಕ್ ಕಂಟ್ರೋಲ್ ಮಾಡೋದೆ ಒಂದು ದೊಡ್ಡ ಸವಾಲು. ಅಪಘಾತಗಳ ಸಂಖ್ಯೆ ಕೂಡ ಕಡಿಮೆ ಆಗ್ತಾನೆ ಇಲ್ಲ. ಹೀಗಾಗಿ ನಗರದಲ್ಲಿ ಹೆಚ್ಚು ಹೆಚ್ಚು ಸ್ಕೈವಾಕರ್ ಗಳು ಆಗ್ಬೇಕು ಅನ್ನೋದು ಜನರ ಕೂಗು.  ವಿಪರ್ಯಾಸ ಅಂದ್ರೆ, ಸದ್ಯ ಇರೋ ಸ್ಕೈವಾಕರ್​ಗಳ ಬಳಕೆಯೇ ಆಗುತ್ತಿಲ್ವಂತೆ. ಹೀಗಾಗಿ ನಾಗರೀಕರು ಸ್ಕೈವಾಕರ್ ಬಳಸುವಂತೆ ಸಂಚಾರಿ ಪೊಲೀಸ್ರು ವಿನೂತನ ಸೆಲ್ಫಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಏನದು ಅಂತೀರಾ ಈ ಸ್ಟೋರಿ ನೋಡಿ.

ಬೆಂಗಳೂರು ಸಂಚಾರ ಪೊಲೀಸರ ಟ್ವೀಟ್​ ತುಂಬಾ ಬರೀ ಸೆಲ್ಫಿ ಪೋಟೋಗಳೇ. ಇದೇಕೆ ಅಂತೀರಾ ಇದೇ ಬೆಂಗಳೂರು ಸಂಚಾರಿ ಪೊಲೀಸರ ನ್ಯೂ ಸೆಲ್ಫಿ ಪ್ಲ್ಯಾನ್. ಜನರು ಸ್ಕೈವಾಕರ್ ಬಳಕೆ ಮಾಡುವಂತೆ ಪೊಲೀಸರು ಸೆಲ್ಫಿ ಕ್ಲಿಕ್ಕಿಸಿ ಪೋಟೋ ಅಪ್ ಲೋಡ್ ಮಾಡೋ ಸ್ಪರ್ಧೆ ಆಯೋಜಿಸಿದ್ದಾರೆ.

Latest Videos

ನಗರದಲ್ಲಿ ಸ್ಕೈವಾಕರ್​ಗಳಿದ್ದರೂ, ಅವುಗಳ ಬಳಕೆ ಕೈಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ಸ್ಕೈವಾಕರ್​ ಬಳಕೆಗೆ ಜನರನ್ನ ಆಕರ್ಷಿಸಲು ಪೊಲೀಸರು  ‘ಬಿ ಸೇಫ್‌’ ಸ್ಪರ್ಧೆಗೆ ಆಹ್ವಾನ ನೀಡಿದ್ದಾರೆ. ಉತ್ತಮ ಸೆಲ್ಫಿಗೇ ಸೂಕ್ತ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.  

ಸ್ಪರ್ಧೆಯಲ್ಲಿ ಭಾಗವಹಿಸೋದು ಹೇಗೆ ? 

ಪಾದಚಾರಿಗಳು ಸ್ಕೈವಾಕ್‌ ಮೇಲೆ ಸೆಲ್ಫಿ  ಕ್ಲಿಕ್ಕಿಸಿಕೊಳ್ಳಬೇಕು. ಬಳಿಕ ಆ ಚಿತ್ರವನ್ನು ತಮ್ಮ ಫೇಸ್‌ಬುಕ್‌ ಅಥವಾ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಬೇಕು. ಆ ಪೋಸ್ಟ್‌ಗೆ #Selfieonskywalk ಎಂದು ಅಡಿಬರಹ ಬರೆದು ಅದನ್ನು @BlrCityPolice ಟ್ವಿಟರ್‌ ಅಥವಾ BENGALURU CITY POLICE ಫೇಸ್‌ಬುಕ್‌ ಪುಟಕ್ಕೆ ಶೇರ್‌ ಮಾಡಬೇಕು.

ಚಿತ್ರಗಳನ್ನು ಅಪ್  ಲೋಡ್‌ ಹಾಗೂ ಶೇರ್‌ ಮಾಡಲು ಏಪ್ರಿಲ್‌ 7 ಕೊನೆಯ ದಿನವಾಗಿದೆ. ವೀಕೆಂಡ್​ನಲ್ಲಿ  ಬಿ ಸೇಫ್​  ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನೂ ಹೆಚ್ಚಿನ ಜನರ ಭಾಗವಹಿಸುವಿಕೆಯ ನಿರೀಕ್ಷೆಯಲ್ಲಿದ್ದಾರೆ ನಗರ ಸಂಚಾರ ಪೊಲೀಸರು.

ಸಂಚಾರ ದಟ್ಟಣೆ, ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಪೊಲೀಸರ ಹೊಸ  ಪ್ರಯೋಗವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

 

click me!