ತಮಿಳುನಾಡು ಸಿಎಂ ಆಗಿ ಪನ್ನೀರ್ ಸೆಲ್ವಂ ಆಯ್ಕೆ

Published : Dec 05, 2016, 07:27 PM ISTUpdated : Apr 11, 2018, 12:35 PM IST
ತಮಿಳುನಾಡು ಸಿಎಂ ಆಗಿ ಪನ್ನೀರ್ ಸೆಲ್ವಂ ಆಯ್ಕೆ

ಸಾರಾಂಶ

AIADMK ಶಾಸಕಾಂಗ ಪಕ್ಷದ ಸಭೆಯಲ್ಲಿ 123ಕ್ಕೂ ಹೆಚ್ಚು ಶಾಸಕರು ಪಕ್ಷದ ನಾಯಕನಾಗಿ ಪನ್ನೀರ್ ಸೆಲ್ವಂ ಅವರನ್ನು ಆಯ್ಕೆ ಮಾಡಿದ್ದಾರೆ.

ಚೆನ್ನೈ(ಡಿ.6): ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಆಪ್ತ ಪನ್ನೀರ್ ಸೆಲ್ವಂ ಆಯ್ಕೆಯಾಗಿದ್ದಾರೆ. AIADMK ಶಾಸಕಾಂಗ ಪಕ್ಷದ ಸಭೆಯಲ್ಲಿ 123ಕ್ಕೂ ಹೆಚ್ಚು ಶಾಸಕರು ಪಕ್ಷದ ನಾಯಕನಾಗಿ ಪನ್ನೀರ್ ಸೆಲ್ವಂ ಅವರನ್ನು ಆಯ್ಕೆ ಮಾಡಿದ್ದಾರೆ. ಪನ್ನೀರ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿರುವುದು ಇದು 3ನೇ ಬಾರಿ.

ಚಹ ಮಾರುತ್ತಿದ್ದವರು

ತಮಿಳುನಾಡು ಸಿಎಂ ಜಯಲಲಿತಾ ಅನುಪಸ್ಥಿತಿಯಲ್ಲಿ ಸಿಎಂ ಹುದ್ದೆ ನಿಭಾಯಿಸಿದವರು ಓ ಪನ್ನೀರ್ ಸೆಲ್ವಂ.. ಯಾವತ್ತು ಅಮ್ಮನ ಮಾತಿಗೆ ಮರು ಉತ್ತರ ನೀಡಿದವರಲ್ಲ. ಅಮ್ಮನ ಬಲಗೈ ಬಂಟ. ಇದೀಗ ಜಯಲಲಿತಾ ಉತ್ತರಾಧಿಕಾರಿಯಾಗಿಯೂ ಪನ್ನೀರ್ ಸೆಲ್ವಂ ಆಯ್ಕೆ ಮಾಡಲು ಸಿದ್ಧತೆ ನಡೆದಿದೆ.. ಅಪೋಲೋ ಆಸ್ಪತ್ರೆಯಲ್ಲೇ ಇಂದು ಸಂಜೆ 6 ಗಂಟೆ ಸುಮಾರಿಗೆ ನಡೆದ ಶಾಸಕರ ತುರ್ತು ಸಭೆಯಲ್ಲಿ  ಪನ್ನೀರ ಸೆಲ್ವಂಗೆ 124 ಶಾಸಕರು ಬೆಂಬಲ ನೀಡಿದ್ದಾರೆ. 

ಸ್ವಾಮಿನಿಷ್ಠೆಗೆ 2 ಬಾರಿ ಒಲಿದಿತ್ತು ಸಿಎಂ ಪಟ್ಟ: ಚಹಾ ಮಾರಿಕೊಂಡು ಜೀವನ ನಡೆಸುತ್ದಿದ್ದ ಪನ್ನೀರ ಸೆಲ್ವಂ ಅವರನ್ನು ಚೆನ್ನೈಗೆ ಕರೆದುಕೊಂಡು ಬಂದು ಜಯಾ ಅಧಿಕಾರ ನೀಡಿದ್ದರು.. ಅಂದಿನಿಂದಲೂ ಅಮ್ಮನ ಅಣತಿಯಂತೆ ನಡೆದುಕೊಂಡವರು ಪನ್ನೀರ್ ಸೆಲ್ವಂ. ಇವರ ಸ್ವಾಮಿನಿಷ್ಠೆಗೆ 2001ರಲ್ಲಿ ತಾನ್ಸಿ ಭೂ ಹಗರಣದಲ್ಲಿ ಜಯಲಲಿತಾ ಜೈಲು ಸೇರಿದಾಗ ಸಿಎಂ ಪಟ್ಟ ಒಲಿದು ಬಂದಿತ್ತು.. ಆದರೂ ಪನ್ನೀರ್ ಸೆಲ್ವಂ ಜಯಲಲಿತಾ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಅಮ್ಮನ ಫೋಟೋ ಚೇರ್​ ಮೇಲೆ ಇಟ್ಟು ರಾಜ್ಯಭಾರ ನಡೆಸಿದ್ದರು. ಜಯಲಲಿತಾ ದೋಷಮುಕ್ತರಾದಾಗ ಸಂತೋಷದಿಂದ ಸಿಎಂ ಸ್ಥಾನದಿಂದ ಕೆಳಗಿಳಿದರು.

ಪನ್ನೀರ್ ಸೆಲ್ವಂ ತಮಿಳುನಾಡಿನ ಪರಿಯಕುಲಂನವರು.. ಸದ್ಯಕ್ಕೆ ಥೆಣಿ ಜಿಲ್ಲೆಯ ಬಾಡಿನಾಯಕ್ಕನೂರ್​ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. 1996  - 2001ರಲ್ಲಿ ಪರಿಯಕುಲಂ ಪುರಸಭೆಯ ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದಾರೆ. 2001-2002  ಮೊದಲ ಬಾರಿ ತಮಿಳುನಾಡು ಸಿಎಂ ಆಗಿ ಅಧಿಕಾರ ನಿರ್ವಹಿಸಿದ್ರು. 2006  ವಿರೋಧ ಪಕ್ಷದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಮತ್ತೆ 2014  -  2015ರಲ್ಲಿ  ಎರಡನೇ ಬಾರಿ ಸಿಎಂ ಆಗಿ ಆಯ್ಕೆಯಾದರು. ಹಣಕಾಸು, ಲೋಕಪಯೋಗಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವೂ ಪನ್ನೀರ್ ಸೆಲ್ವಂಗೆ ಇದೆ.  

ಹೀಗೆ ಸ್ವಾಮಿ ನಿಷ್ಠೆಯಿಂದ ಪನ್ನೀರ್ ಸೆಲ್ವಂ ಸಿಎಂ ಹುದ್ದೆಯನ್ನ ನಿರ್ವಹಿಸಿದ್ದಾರೆ.ಇದೀಗ ತಮ್ಮ ನಾಯಕಿಯ ನಿಧನದ ನಂತರ ಪನ್ನೀರ್ ಸೆಲ್ವಂ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ