ವಿಶ್ವಾಸ 'ಕಾಳಗ' ಗೆದ್ದ ಪಳನಿ: ಪನ್ನೀರ್'ಗೆ ತಣ್ಣೀರು

Published : Feb 18, 2017, 10:07 AM ISTUpdated : Apr 11, 2018, 12:52 PM IST
ವಿಶ್ವಾಸ 'ಕಾಳಗ' ಗೆದ್ದ ಪಳನಿ: ಪನ್ನೀರ್'ಗೆ ತಣ್ಣೀರು

ಸಾರಾಂಶ

ತಮಿಳುನಾಡು ವಿಧಾನಸಭೆಯಲ್ಲಿಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ 122 ಮತ ಪಡೆಯುವ ಮೂಲಕ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಗಾದಿಯನ್ನು ಸುಭದ್ರಪಡಿಸಿಕೊಂಡಿದ್ದಾರೆ.

ಚೆನ್ನೈ (ಫೆ. 18): ತಮಿಳುನಾಡು ವಿಧಾನಸಭೆ ಇಂದು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ತಮಿಳುನಾಡು ಸಿಎಂ ಆಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ 122 ಮತ ಪಡೆಯುವ ಮೂಲಕ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಗಾದಿಯನ್ನು ಸುಭದ್ರಪಡಿಸಿಕೊಂಡಿದ್ದಾರೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಪಳನಿ ಅವರಿಗೆ ಕನಿಷ್ಠ 117 ಶಾಸಕರ ಬೆಂಬಲ ಸಾಬೀತು ಪಡಿಸಬೇಕಿತ್ತು.ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷಗಳು ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸುವುದಾಗಿ ಈ ಮುಂಚೆಯೇ ನಿರ್ಧರಿಸಿದ್ದುವು.

ಮಾಧ್ಯಮಗಳಿಗೆ ನಿಷೇಧ:

ವಿಶ್ವಾಸಮತ ಯಾಚನೆಯ ವರದಿಗೆ ತೆರಳಿದ್ದ ಮಾಧ್ಯಮಗಳಿಗೆ ನಿಷೇಧ ಹೇರಲಾಗಿತ್ತು. ಈ ವಿಚಾರವಾಗಿ ಪೊಲೀಸರು ಹಾಗೂ ಪತ್ರಕರ್ತರ ನಡುವೆ ವಾಗ್ವಾದ ನಡೆಯಿತು.

30 ವರ್ಷಗಳ ಬಳಿಕ ವಿಶ್ವಾಸಮತ:

ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆದದ್ದು ಕಳೆದ 30 ವರ್ಷಗಳಲ್ಲಿ ಇದೇ ಮೊದಲು. 1988, ಜನವರಿ 27ರಂದು ಜಾನಕಿ ರಾಮಚಂದ್ರನ್ ವಿಶ್ವಾಸಮತ ಎದುರಿಸಿ, ಗದ್ದಲದ ನಡುವೆ ಜಾನಕಿ ರಾಮಚಂದ್ರನ್​​ ಗೆದ್ದಿದ್ದರು. ಆದರೆ ಎರಡೇ ದಿನಗಳಲ್ಲಿ ಜಾನಕಿ ನೇತೃತ್ವದ ಸರ್ಕಾರವನ್ನು ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಕೇಂದ್ರ ಸರ್ಕಾರ ವಜಾ ಮಾಡಿತ್ತು.

ಬಿಗಿ ಭದ್ರತೆ:

ರಾಜ್ಯದಲ್ಲಿ ಸಂಭವಿಸುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ರಾಜ್ಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜ.29ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ನಟ ಪ್ರಕಾಶ್‌ ರಾಜ್‌ ರಾಯಭಾರಿ
ಪಂದ್ಯಾವಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಪೂರಕವಾಗಿಲ್ಲ: ಸರ್ಕಾರದ ಸಮಿತಿ ಶಿಫಾರಸು