ನಟಿ ಅಪಹರಣ: 7 ಮಂದಿ ಆರೋಪಿಗಳು ವಶಕ್ಕೆ

Published : Feb 18, 2017, 09:19 AM ISTUpdated : Apr 11, 2018, 12:35 PM IST
ನಟಿ ಅಪಹರಣ: 7 ಮಂದಿ ಆರೋಪಿಗಳು ವಶಕ್ಕೆ

ಸಾರಾಂಶ

ದುಷ್ಕರ್ಮಿಗಳು ತಾವು ನಟಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರ ಚಿತ್ರಗಳನ್ನು ಮೊಬೈಲ್‌'ನಲ್ಲಿ ಸೆರೆಹಿಡಿದಿರುವ, ಕೃತ್ಯ ಬಹಿರಂಗಪಡಿಸಿದರೆ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿರುವ  ವಿಷಯಗಳನ್ನು ಕೊಚ್ಚಿ ಪೊಲೀಸರು ನಿರಾಕರಿಸಿದ್ದಾರೆ.

ಎರ್ನಾಕುಲಂ (ಫೆ.19): ಖ್ಯಾತ ಮಳಯಾಳಂ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಪಹರಣದ ಹಿಂದೆ ಚಿತ್ರತಂಡದ ಕೆಲವರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ನಟಿ ಕಾರು ಚಾಲಕ ಮಾರ್ಟಿನ್ ಎಂಬಾತನನ್ನು ಬಂಧಿಸಿದ್ದಾರೆ.

ಶುಕ್ರವಾರ ಚಿತ್ರದ ಚಿತ್ರೀಕರಣ ಮುಗಿಸಿದ ನಟಿ , ಚಿತ್ರ ತಂಡ ಒದಗಿಸಿದ್ದ  ಕಾರ್‌'ನಲ್ಲಿ ಕೊಚ್ಚಿಗೆ ಹೊರಟಿದ್ದಾರೆ. ಆ ಕಾರ್‌ನ್ನು  ಮಾರ್ಟಿನ್ ಚಲಾಯಿಸುತ್ತಿದ್ದು, ರಾತ್ರಿ 9ರ ವೇಳೆ ದಾರಿ ಮಧ್ಯೆ ಅಪಘಾತ ನಡೆದಿದೆ.

ಅಪಘಾತವಾದ ಕೆಲವೇ ನಿಮಿಷಗಳಲ್ಲಿ  ಅಲ್ಲಿ ನಿಂತಿದ್ದ  ಬೇರೊಂದು ಕಾರ್‌'ನಿಂದ ನಾಲ್ವರನ್ನು ಮಾರ್ಟಿನ್ ತನ್ನ ಕಾರಿಗೆ ಹತ್ತಿಸಿಕೊಂಡಿದ್ದಾನೆ.  ಆ ನಾಲ್ವರೂ ಚಿತ್ರ ತಂಡದವರು ಎಂದು ಹೇಳಲಾಗುತ್ತಾ ಇದ್ದು .  ನಂತರ ಅವರು ಪಳರಿವಟ್ಟಂ ಎಂಬಲ್ಲಿ ಇಳಿದುಕೊಂಡಿದ್ದಾರೆ. ನಂತರ ಮಾರ್ಟಿನ್, ನಟಿಯನ್ನು ಅವರ ಮನೆಯ ಬಳಿ ಬಿಟ್ಟಿದ್ದಾನೆ. ಆ ನಂತರ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಈಗಾಗಲೇ ಚಾಲಕ ಮಾರ್ಟಿನ್ ಅನ್ನು ಬಂಧಿಸಿದ್ದಾರೆ. ಆತ ಕೃತ್ಯದಲ್ಲಿ ತಾನೂ ಭಾಗಿಯಾಗಿರುವುದಾಗಿ  ಒಪ್ಪಿಕೊಂಡಿದ್ದಾನೆ’ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳು ತಾವು ನಟಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರ ಚಿತ್ರಗಳನ್ನು ಮೊಬೈಲ್‌'ನಲ್ಲಿ ಸೆರೆಹಿಡಿದಿದ್ದಾರೆ. ಕೃತ್ಯ ಬಹಿರಂಗಪಡಿಸಿದರೆ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಇವೆಲ್ಲವನ್ನೂ ಕೊಚ್ಚಿ ಪೊಲೀಸರು ನಿರಾಕರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ