ದುಷ್ಮನ್‌ಗಳನ್ನೂ ದೋಸ್ತ್ ಮಾಡುತ್ತೆ ಚಹಾ: ಪಾಕ್‌ ವ್ಯಾಪಾರಿಗೆ ಅಭಿ ಪೋಸ್ಟರ್‌ ಬಾಯ್‌!

Published : Mar 14, 2019, 12:27 PM ISTUpdated : Mar 14, 2019, 12:46 PM IST
ದುಷ್ಮನ್‌ಗಳನ್ನೂ ದೋಸ್ತ್ ಮಾಡುತ್ತೆ ಚಹಾ: ಪಾಕ್‌ ವ್ಯಾಪಾರಿಗೆ ಅಭಿ ಪೋಸ್ಟರ್‌ ಬಾಯ್‌!

ಸಾರಾಂಶ

ಪಾಕ್‌ ಚಹಾ ವ್ಯಾಪಾರಿಗೆ ಅಭಿನಂದನ್‌ ಪೋಸ್ಟರ್‌ ಬಾಯ್‌!| ಅಭಿ ಚಹಾ ಕುಡಿವ ಫೋಟೋ ಹಾಕಿಕೊಂಡು ಭರ್ಜರಿ ವ್ಯಾಪಾರ| ದುಷ್ಮನ್‌ಗಳನ್ನೂ ದೋಸ್ತ್ ಮಾಡುತ್ತೆ ಚಹಾ!

ಕರಾಚಿ[ಮಾ.14]: ಪಾಕಿಸ್ತಾನದ ವಶದಿಂದ ಬಿಡುಗಡೆಗೊಂಡ ಭಾರತದ ವಾಯುಪಡೆ ಪೈಲಟ್‌ ಅಭಿನಂದನ್‌ ವರ್ತಮಾನ್‌ ಅವರ ಭಾವಚಿತ್ರವನ್ನು ಭಾರತದ ರಾಜಕೀಯ ಪಕ್ಷಗಳು ಚುನಾವಣಾ ಉದ್ದೇಶಕ್ಕೆ ಬಳಸಿಕೊಂಡು ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿವೆ. ಆದರೆ ಅಭಿನಂದನ್‌ ಅವರು ಚಹಾ ಕುಡಿಯುವ ದೃಶ್ಯವು ಪಾಕಿಸ್ತಾನದ ಚಹಾ ಮಾರಾಟಗಾರರಿಗೆ ವರದಾನವಾಗಿ ಪರಿಣಮಿಸಿದೆ.

ಅಭಿ ಸಮವಸ್ತ್ರ ಪಾಕ್ ಮ್ಯೂಸಿಯಂನಲ್ಲಿ?

ಅಭಿನಂದನ್‌ ಅವರು ಪಾಕಿಸ್ತಾನದ ವಶದಲ್ಲಿದ್ದಾಗ ಚಹಾ ಸೇವಿಸಿ ಆ ಬಗ್ಗೆ ವಿವರಣೆ ನಿಡುವ ದೃಶ್ಯವೊಂದನ್ನು ಪಾಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿತ್ತು. ನಂತರ ಭಾರತವು ಈ ದೃಶ್ಯಗಳನ್ನು ತೆಗೆದುಹಾಕುವಂತೆ ಯೂಟ್ಯೂಬ್‌ಗೆ ಕೇಳಿಕೊಂಡಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಪೈಲಟ್ ಅಭಿ ಫಾಲೋ ಮಾಡ್ತೀದ್ದೀರಾ? IAF ಕೊಟ್ಟ ಸ್ಪಷ್ಟನೆ ಇದು!

ಈ ನಡುವೆ, ಅಭಿನಂದನ್‌ ಚಹಾ ಸೇವಿಸುವ ದೃಶ್ಯದ ಫೋಟೋವೊಂದನ್ನು ತನ್ನ ಚಹಾ ಅಂಗಡಿ ಮೇಲೆ ಹಾಕಿಕೊಂಡಿರುವ ಕರಾಚಿ ಚಹಾ ವ್ಯಾಪಾರಿಯೊಬ್ಬ, ‘ಐಸೀ ಚಾಯ್‌ ಕಿ ದುಷ್ಮನ್‌ ಕೋ ಭಿ ದೋಸ್ತ್ ಬನಾಯೇ’ (ಇಂದು ಎಂಥಾ ಚಹಾ ಎಂದರೆ ವೈರಿಗಳನ್ನೂ ಸ್ನೇಹಿತರನ್ನಾಗಿ ಮಾಡುತ್ತದೆ) ಎಂದು ಉರ್ದುದಲ್ಲಿ ಬರೆದುಕೊಂಡು ಭರ್ಜರಿ ವ್ಯಾಪಾರ ಮಾಡಿಕೊಳ್ಳುತ್ತಿದ್ದಾನೆ.

ಈತನ ಅಂಗಡಿಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಹೊಸ ಮನೆಗೆ ಪೇಂಟ್ ಮಾಡುವಾಗ ಈ 7 ತಪ್ಪು ಮಾಡಬೇಡಿ!
ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!