
ವಿಶ್ವಸಂಸ್ಥೆ(ಜ.27): ಪಾಕಿಸ್ತಾನವು ಮತ್ತೆ ಕಾಶ್ಮೀರ ವಿಷಯದ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಗಾದೆ ತೆಗೆದಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಧ್ಯಪ್ರಾಚ್ಯದ ಪ್ರಸ್ತುತ ಅಶಾಂತಿಯ ವಿಷಯದ ಬಗ್ಗೆ ನಡೆದ ಚರ್ಚೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹಾ ಸೋಧಿ ಈ ಬಗ್ಗೆ ಪ್ರಸ್ತಾಪಿಸಿ' ಪಾಕಿಸ್ತಾನವು ಪ್ಯಾಲೆಸ್ಟೀನಿಯರ ಕಾನೂನುಬದ್ಧ ಹಕ್ಕುಗಳನ್ನು ಬೆಂಬಲಿಸುತ್ತದೆ, ವಾಸ್ತವವಾಗಿ, ಉದಾಹರಣೆಗೆ ಪ್ರಚಲಿತವಿರುವ ವಿದೇಶಿ ಆಕ್ರಮಣದಲ್ಲಿ ವಾಸಿಸುವ ಕಾಶ್ಮೀರಿ ಜನರ ವಿಷಯದಂತೆ' ಬೆಂಬಲಿಸುತ್ತದೆ
ಅಲ್ಲದೆ, ಈ ಗೌರವಾನ್ವಿತ ಸಂಸ್ಥೆಯು ಅದರ ಜವಾಬ್ದಾರಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಪ್ಯಾಲೆಸ್ಟೈನ್ ಮತ್ತು ಕಾಶ್ಮೀರ ಮುಂತಾದ ಸುದೀರ್ಘವಾದ ವಿವಾದಗಳನ್ನು ತನ್ನದೇ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಖಚಿತಪಡಿಸಬೇಕು. ಇದರಿಂದಾಗಿ ವಿಶ್ವದ ಜನರು ವಿಶ್ವಸಂಸ್ಥೆಯಲ್ಲಿರುವ ತನ್ನ ಸಂಪೂರ್ಣ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ" ಎಂದು ವಿವಾದವನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುವುದಿಲ್ಲ'. ಅಲ್ಲದೆ ಇವೆರಡೂ ದೇಶಗಳು ಮಧ್ಯಸ್ಥಿಕೆಯ ಮೂಲಕ ಸಮಸ್ಯೆ ಬಗೆಹರಿಸುವುದನ್ನು ಬೆಂಬಲಿಸುತ್ತದೆ ಎಂಬ ಹೇಳಿಕೆಯ ಹಿನ್ನಲೆಯಲ್ಲಿ ಪಾಕ್ ಹೇಳಿಕೆ ತಿರುವು ಪಡೆದುಕೊಂಡಿದೆ.
ಭಾರತ ಕೂಡ ವಿವಾದದ ಬಗ್ಗೆ ಸ್ಪಷ್ಟಪಡಿಸಿ, ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಬೇರೆಯವರ ಮಧ್ಯಸ್ಥಿಕೆಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಇದನ್ನು ಭಾರತ ವಿರೋಧಿಸಿತ್ತದೆ' ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.