
ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಕನಿಷ್ಠ 40 ಮಂದಿ ಬಲಿಯಾಗಿದ್ದು, 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ತಾಲಿಬಾನಿ ಉಗ್ರರು ಹೊಣೆ ಹೊತ್ತಿದ್ದಾರೆ.
ಸಾರ್ವಜನಿಕರ ವಾಹನಗಳಿಗೆ ನಿಷೇಧವಿರುವ ರಸ್ತೆಗೆ ಸ್ಫೋಟಕಗಳಿರುವ ಆ್ಯಂಬುಲೆನ್ಸ್ ಮೂಲಕ ತೆರಳಿ, ಈ ದಾಳಿ ನಡೆಸಲಾಗಿದೆ. ಯುರೋಪ್ ಒಕ್ಕೂಟ ಹಾಗೂ ಉನ್ನತ ಶಾಂತಿ ಪರಿಷತ್‌ನ ಹಳೆ ಕಚೇರಿ ಇದ್ದ ಆಂತರಿಕ ಸಚಿವಾಲಯದ ಕಟ್ಟಡ ಸಮೀಪ ಈ ಅನಾಹುತ ನಡೆದಿದೆ.
ವಾರದೆ ಹಿಂದೆಯಷ್ಟೇ ತಾಲಿಬಾನ್ ಉಗ್ರರು ಇಲ್ಲಿನ ಐಷಾರಾಮಿ ಹೊಟೇಲ್ ಸಮೀಪ ನಡೆಸಿದ ದಾಳಿಗೆ 20 ಮಂದಿ ಮೃತಪಟ್ಟಿದ್ದರು. ನಗರದ ಪೊಲೀಸ್ ಠಾಣೆ, ರಾಯಭಾರಿ ಕಚೇರಿಗಳಿರುವ ಈ ಪ್ರದೇಶದಲ್ಲಿ ಹೆಚ್ಚು ಜನರು ಕಿಕ್ಕಿರಿದು ಸೇರಿದ್ದು, ಈ ಸಂದರ್ಭದಲ್ಲಿ ಈ ಅನಾಹುತ ನಡೆದಿದೆ.
ಮೃತಪಟ್ಟವರ ಸಂಖ್ಯೆ ಏರುವ ಸಾಧ್ಯತೆಯಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.