ಪಾಕ್'ನಲ್ಲಿ 123 ಸಾವು; ಟ್ಯಾಂಕರ್'ನಿಂದ ಬಿದ್ದ ಪೆಟ್ರೋಲ್ ಬಾಚಿಕೊಳ್ಳಲು ಹೋದವರಿಗೆ ಎರಗಿದ್ದ ಜವರಾಯ

By Suvarna Web DeskFirst Published Jun 25, 2017, 12:41 PM IST
Highlights

ಟ್ಯಾಂಕರ್'ಗೆ ಬೆಂಕಿ ತಗುಲಿ ಘೋರ ದುರಂತ ಸಂಭವಿಸಿದೆ. ಕೆಲ ವರದಿಗಳ ಪ್ರಕಾರ 123ಕ್ಕೂ ಹೆಚ್ಚು ಜನರು ಬೆಂಕಿಗೆ ಆಹುತಿಯಾಗಿದ್ದಾರೆ. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.

ನವದೆಹಲಿ(ಜೂನ್ 25): ಆಯಿಲ್ ಟ್ಯಾಂಕರ್'ವೊಂದು ಸ್ಫೋಟಗೊಂಡು ನೂರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ದುರ್ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸಂಭವಿಸಿದೆ. ಪಂಜಾಬ್'ನ ಬಹಾವಲ್'ಪುರ್ ನಗರದ ಅಹ್ಮದ್'ಪುರ್ ಶಾರ್ಕಿಯಾ ಎಂಬಲ್ಲಿ ತೈಲ ಟ್ಯಾಂಕರ್'ವೊಂದು ಕೆಳಗುರುಳಿ ಬಿದ್ದಿದೆ. ಟ್ಯಾಂಕರ್'ನಿಂದ ರಸ್ತೆಗೆ ಹೊರಚೆಲ್ಲುತ್ತಿದ್ದ ಪೆಟ್ರೋಲನ್ನು ಸಂಗ್ರಹಿಸಲು ಸುತ್ತಲಿನ ಗ್ರಾಮಸ್ಥರು ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಟ್ಯಾಂಕರ್'ಗೆ ಬೆಂಕಿ ತಗುಲಿ ಘೋರ ದುರಂತ ಸಂಭವಿಸಿದೆ. ಕೆಲ ವರದಿಗಳ ಪ್ರಕಾರ 123ಕ್ಕೂ ಹೆಚ್ಚು ಜನರು ಬೆಂಕಿಗೆ ಆಹುತಿಯಾಗಿದ್ದಾರೆ. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.

click me!