
ನವದೆಹಲಿ(ಜೂ.25): ಸುದೀರ್ಘ ಅವಧಿವರೆಗೆ ಬ್ಯಾಂಕ್ ಖಾತೆಯಲ್ಲಿ ಯಾವುದೇ ವ್ಯವಹಾರ ನಡೆಸದಿದ್ದರೆ, ಅಡುಗೆ ಅನಿಲ ಸಿಲಿಂಡರ್ ಅನ್ನು ಪಡೆಯದೇ ಇದ್ದರೆ ಆ ಸೇವೆಗಳು ನಿಷ್ಕಿ್ರಯವಾಗುವುದು ಗೊತ್ತು. ಆದರೆ ಆಧಾರ್ ಸಂಖ್ಯೆ ಕೂಡ ನಿಷ್ಕಿ್ರಯವಾಗುವುದು ನಿಮಗೆ ಗೊತ್ತಾ?
ಹೌದು. ಸತತ ಮೂರು ವರ್ಷಗಳ ಕಾಲ ಆಧಾರ್ ಸಂಖ್ಯೆಯನ್ನು ಯಾವುದೇ ಸೇವೆಗೂ ಬಳಸದೇ ಇದ್ದರೆ ಅದು ನಿಷ್ಕಿ್ರಯವಾಗಿಬಿಡುತ್ತದೆ ಎಂದು ಸ್ವತಃ ಆಧಾರ್ ಪ್ರಾಧಿಕಾರದ ಅಧಿಕಾರಿಗಳೇ ಹೇಳಿದ್ದಾರೆ.
ಆಧಾರ್ ಸಂಖ್ಯೆ ಪಡೆದ ಬಳಿಕ ಬ್ಯಾಂಕ್ ಖಾತೆ ಅಥವಾ ಪ್ಯಾನ್ ಸಂಖ್ಯೆ ಜತೆ ಜೋಡಣೆ ಮಾಡದೇ ಇದ್ದರೆ, ಪಿಂಚಣಿ ಸೇರಿದಂತೆ ಯಾವುದೇ ಸೇವೆಗಳಿಗೂ ಆಧಾರ್ ಬಳಸದೇ ಇದ್ದರೆ ಅದು ನಿಷ್ಕಿ್ರಯವಾಗುತ್ತದೆ.
ಅಂತಹ ಸಂದರ್ಭದಲ್ಲಿ ಆಧಾರ್‌ಗೆ ಮತ್ತೆ ಜೀವ ತುಂಬಲು ಸಮೀಪದ ನೋಂದಣಿ ಕೇಂದ್ರಕ್ಕೆ ಪೂರಕ ದಾಖಲೆಗಳ ಜತೆ ಹೋಗಬೇಕಾಗುತ್ತದೆ. ಆಧಾರ್ ಪರಿಷ್ಕರಣೆ ಅರ್ಜಿಯನ್ನು ತುಂಬಿ, ಹೊಸದಾಗಿ ಬಯೋಮೆಟ್ರಿಕ್ಸ್ ನೀಡಿ ಅಪ್‌ಡೇಟ್ ಮಾಡಿಸಬೇಕಾಗುತ್ತದೆ. ಇದಕ್ಕಾಗಿ 25 ರು. ಪಾವತಿಸಬೇಕಾಗುತ್ತದೆ. ಆದರೆ ವಿದ್ಯಾರ್ಥಿಗಳು ತಮ್ಮ ಆಧಾರ್ ನಂಬರ್ ಅನ್ನು ಯಾವುದಕ್ಕೂ ಬಳಸಿಕೊಂಡಿರುವುದಿಲ್ಲ. ಅಂಥ ಪರಿಸ್ಥಿತಿಯಲ್ಲಿ ಆಧಾರ್ ಕಾರ್ಡ್ ಕಥೆ ಏನು ಎಂಬುದಕ್ಕೆ ಆಧಾರ್ ವೆಬ್‌ಸೈಟ್‌ನಲ್ಲಿ ಕೂಡಾ ಮಾಹಿತಿ ನೀಡಿಲ್ಲ.
ಬಹುತೇಕರ ಆಧಾರ್ ನಿಷ್ಕ್ರಿಯ ಆಗದು!
ಸತತ ಮೂರು ವರ್ಷ ಬಳಕೆ ಮಾಡದೇ ಇದ್ದರೆ ಆಧಾರ್ ನಿಷ್ಕಿ್ರಯವಾಗಿಬಿಡುತ್ತದೆ ಎಂದು ಆಧಾರ್ ಪ್ರಾಧಿಕಾರ ಹೇಳುತ್ತಿದೆಯಾದರೂ ಅದರ ಬಿಸಿ ಹೆಚ್ಚಿನ ಜನರಿಗೆ ತಟ್ಟುವುದಿಲ್ಲ. ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ, ಪ್ಯಾನ್ ಸಂಖ್ಯೆ ಜತೆ ಜೋಡಣೆ ಮಾಡಿಸದಿದ್ದರೆ, ಪಿಂಚಣಿಯಂತಹ ಸೇವೆ ಪಡೆಯಲು ಬಳಸದೇ ಇದ್ದರೆ ಅದು ನಿಷ್ಕಿ್ರಯವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಬ್ಯಾಂಕ್ ಖಾತೆ ತೆರೆಯಲು, ಸಿಲಿಂಡರ್ ಸಬ್ಸಿಡಿ ಗಳಿಸಲು, ಸರ್ಕಾರದ ಇತರೆ ಪ್ರಯೋಜನ ಪಡೆದುಕೊಳ್ಳಲು ಆಧಾರ್ ಕಡ್ಡಾಯ ಮಾಡಿರುವುದರಿಂದ ಹೆಚ್ಚಿನವರಿಗೆ ತೊಂದರೆಯಾಗದು ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.