ಹಾಫಿಝ್ ಸಯೀದ್ ಸಂಘಟನೆಯನ್ನು ನಿಷೇಧಿಸಿದ ಪಾಕಿಸ್ತಾನ

By Suvarna Web DeskFirst Published Jun 30, 2017, 3:47 PM IST
Highlights

ಕೊನೆಗೂ ಪಾಕಿಸ್ತಾನವು ಹಾಫಿಝ ಸಯೀದ್ ನೇತೃತ್ವದ ಸಂಘಟನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಜಮಾತುದ್ದಾವಾದ ಇನ್ನೊಂದು ರೂಪವಾದ ತಹ್ರೀಕೆ ಆಝಾದಿ ಜಮ್ಮು & ಕಾಶ್ಮೀರ ಸಂಘನಟೆಯನ್ನು ಪಾಕಿಸ್ತಾನವು ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಿದೆ

ನವದೆಹಲಿ: ಕೊನೆಗೂ ಪಾಕಿಸ್ತಾನವು ಹಾಫಿಝ ಸಯೀದ್ ನೇತೃತ್ವದ ಸಂಘಟನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಜಮಾತುದ್ದಾವಾದ ಇನ್ನೊಂದು ರೂಪವಾದ ತಹ್ರೀಕೆ ಆಝಾದಿ ಜಮ್ಮು & ಕಾಶ್ಮೀರ ಸಂಘನಟೆಯನ್ನು ಪಾಕಿಸ್ತಾನವು ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಿದೆ ಎಂದು ಪಾಕಿಸ್ತಾನದ ಭಯೋತ್ಪಾದನೆ ನಿರ್ಮೂಲನೆ ಪ್ರಾಧಿಕಾರದ ವೆಬ್’ಸೈಟ್ನಲ್ಲಿ ಹೇಳಲಾಗಿದೆ.

ಆದರೆ ಹಾಫಿದ್ ಸಯೀದ್ ಮುಖ್ಯಸ್ಥನಾಗಿರುವ ಜಮಾತುದ್ದಾವಾ ಸಂಘಟನೆಯನ್ನು ಕಣ್ಗಾವಲು ಪಟ್ಟಿಯಲ್ಲಿ ಹಾಕಲಾಗಿದೆ. ಕಳೆದ ಜನವರಿಯಲ್ಲಿ ಹಾಫಿಝ್ ಸಯೀದನನ್ನು ಪಾಕಿಸ್ತಾನವು ಗೃಹ ಬಂಧನದಲ್ಲಿಟ್ಟಿತ್ತು.

ಡೊನಾಲ್ಡ್ ಟ್ರಂಪ್ ಸರ್ಕಾರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ  ತಹ್ರೀಕೆ ಆಝಾದಿ ಜಮ್ಮು & ಕಾಶ್ಮೀರ ಸಂಘನಟೆಯನ್ನು ನಿಷೇಧಿತ ಸಂಘಟನೆಗಳ ಸಾಲಿಗೆ ಸೇರಿಸಲಾಗಿದೆ ಎನ್ನಲಾಗಿದೆ.

click me!