
ಉತ್ತರಪ್ರದೇಶ(ಜೂ.30): ಉತ್ತರ ಭಾರತವದಲ್ಲಿ ನಡೆಯುವ ವಿವಾಹಗಳನ್ನು ಗಮನಿಸಿದರೆ ಬಹುಶಃ ನಾಗಿನ್ ಡಾನ್ಸ್ ಇಲ್ಲದೆ ಇಲ್ಲಿನ ಮದುವೆಗಳೇ ನೆರವೇರುವುದಿಲ್ಲವೇನೋ ಅಂತ ಅನಿಸುತ್ತದೆ. ಇನ್ನು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುವ ಅಲ್ಲಿನ ದಿಬ್ಬಣಗಳ ವಿಡಿಯೋದಲ್ಲೂ ತಮ್ಮದೇ ಶೈಲಿಯಲ್ಲಿ ನಾಗಿನ್ ಡಾನ್ಸ್ ಮಾಡುವವರನ್ನು ನೋಡಿ ಹಲವಾರು ಬಾರಿ ನಕ್ಕಿದ್ದೂ ಇದೆ. ಆದರೆ ಉತ್ತರ ಪ್ರದೇಶದ ಶಹಜಹಾಂಪುರದಲ್ಲಿ ವಿಚಿತ್ರ ಪ್ರಕರಣವೊಂದು ನಡದಿದೆ. ಇಲ್ಲೊಬ್ಬಳು ಮಧುಮಗಳು ವರ ಮಾಡಿದ ನಾಗಿನ್ ಡಾನ್ಸ್ ಇಷ್ಟವಾಗಲಿಲ್ಲವೆಂದು ಮದುವೆಯಾಗಲು ನಿರಾಕರಿಸಿದ್ದಾಳೆ. ಹಲವು ಬಾರಿ ಈಕೆಯನ್ನು ಸಮಾಧಾನಿಸಲು ಪ್ರಯತ್ನಿಸಿದರೂ ಯಾವುದೇ ಉಪಯೋಗವಾಗಿಲ್ಲ.
ನಡೆದದ್ದೇನು?
ಎನ್'ಬಿಟಿ ಈ ಕುರಿತಾಗಿ ವರದಿ ಮಾಡಿದ್ದು ದಿಬ್ಬಣವನ್ನು ಅದ್ಧೂರಿಯಾಗಿ ಸ್ವಾಗತಿಸಿದ ಬಳಿಕ ವರನ ಗೆಳೆಯರು ಭರ್ಜರಿ ಕುಣಿದಿದ್ದಾರೆ. ಈ ಮಧ್ಯೆ ಓರ್ವ ಗೆಳೆಯ ವರನನ್ನೂ ಡಾನ್ಸ್ ಮಾಡಲು ಕರೆತಂದಿದ್ದು,. ರೊಚ್ಚಿಗೆದ್ದ ವರ ನಾಗಿನ್ ಡಾನ್ಸ್ ಮಾಡಲಾರಂಭಿಸಿದ್ದಾನೆ. ಆದರೆ ವರನ ಡಾನ್ಸ್ ಮಾಡುವ ಅವತಾರ ಕಂಡ ಹೆಣ್ಣಿನ ಮನೆಯವರು ದಂಗಾಗಿದ್ದಾರೆ.
ವರನ ಹಾವ ಭಾವ ಕಂಡು ಆತ ಮದ್ಯ ಸೇವಿಸಿರುವಂತೆ ಕಂಡು ಬರುತ್ತಿತ್ತಂತೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಮಧುಮಗಳು ಆತನೊಂದಿಗೆ ಮದುವೆಯಾಗಲು ನಿರಾಕರಿಸಿದ್ದಾಳೆ. ಮಧುಮಗಳ ಈ ನಿರ್ಧಾರ ಕೇಳಿ ಗಂಡು ಹಾಗೂ ಹೆಣ್ಣಿನ ಮನೆಯವರಿಗೆ ಶಾಕ್ ಆಗಿದೆ ಯಾಕೆಂದರೆ ಇಬ್ಬರ ಮನೆಯವರೂ ಆತ್ಮೀಯ ಸ್ನೇಹಿತರಾಗಿದ್ದು, ಮದುವೆಗೂ ಮುನ್ನ ಹಣಕಾಸಿನ ವಹಿವಾಟೂ ನಡೆದಿದೆಯಂತೆ.
ಇದಾದ ಬಳಿಕ ಮನೆಯವರು ಮಧುಮಗಳಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಮಧ್ಯ ಸೇವಿಸುವ ಪತಿಯೊಂದಿಗೆ ನಾನು ಬಾಳಲಾರೆ ಎಂಬುವುದಷ್ಟೇ ಆಕೆಯ ಮಾತಾಗಿತ್ತಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.