
ನವದೆಹಲಿ (ಜೂ.30): 1962 ರಲ್ಲಿದ್ದ ಭಾರತಕ್ಕೂ 2017 ರಲ್ಲಿರುವ ಭಾರತಕ್ಕೂ ಬಹಳ ವ್ಯತ್ಯಾಸವಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಚೀನಾ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.
ಭಾರತ 1962 ರ ಯುದ್ಧದಿಂದ ಪಾಠ ಕಲಿತಂತಿಲ್ಲ. ಯುದ್ಧದ ಬಗ್ಗೆ ಮಾತನಾಡುವ ಮುನ್ನ ಇತಿಹಾಸದಿಂದ ಪಾಠ ಕಲಿತುಕೊಳ್ಳಲಿ ಎಂದು ಚೀನಾ ನಿನ್ನೆ ಹೇಳಿತ್ತು. ಇದಕ್ಕೆ ಪ್ರತಿಯಾಗಿ ರಕ್ಷಣಾ ಸಚಿವ ಅರುಣ್ ಜೇಟ್ಲಿ ಉತ್ತರಿಸಿದ್ದಾರೆ.
1962 ರ ಭಾರತದ ಸ್ಥಿತಿಯನ್ನು ನಮಗೆ ನೆನೆಪಿಸಲು ಚೀನಾ ಯತ್ನಿಸುತ್ತಿದೆ. ಆದರೆ ಈಗ ಕಾಲ ಬದಲಾಗಿದೆ. 2017 ರಲ್ಲಿ ಭಾರತದ ಸ್ಥಿತಿ ಅವತ್ತಿನಂತಿಲ್ಲ. ಭಿನ್ನವಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಡಾಗ್ಲಾಂಗ್ ಪ್ರದೇಶದಿಂದ ಸೇನೆಯನ್ನು ಹಿಂತೆಗೆದುಕೊಳ್ಳದಿದ್ದರೆ ಉಭಯ ದೇಶಗಳ ನಡುವಿನ ಗಡಿ ವಿವಾದವನ್ನು ಇನ್ನಷ್ಟು ದೊಡ್ಡದಾಗಿಸುತ್ತೇವೆ ಎಂದು ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ.
ನಮ್ಮ ನೆಲದಲ್ಲಿ ಚೀನಾ ಹಕ್ಕು ಸಾಧಿಸಲು ಹೊರಟಿದೆ. ಇದು ಸರಿಯಲ್ಲ ಎಂದು ಭೂತಾನ್ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಭೂತಾನ್ ಹೇಳಿಕೆಯ ನಂತರ ಅರುಣ್ ಜೇಟ್ಲಿ, ಇದು ಭೂತಾನಿನ ಪ್ರದೇಶ. ಭಾರತದ ಗಡಿ ಭಾಗಕ್ಕೆ ಸನಿಹದಲ್ಲಿದೆ. ಹಾಗಾಗು ಭಾರತ-ಭೂತಾನ್ ಸೇರಿ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.