
ಟೆಹರನ್(ಏ.23): ಇರಾನ್ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಯಡವಟ್ಟು ಮಾಡಿಕೊಂಡಿದ್ದಾರೆ. ಇರಾನ್ ಅಧ್ಯಕ್ಷ ಹಸನ್ ರೌಹಾನಿ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪೂರ್ವ ಏಷ್ಯಾದ ದ್ವೀಪ ರಾಷ್ಟ್ರ ಜಪಾನ್ ಯುರೋಪಿಯನ್ ರಾಷ್ಟ್ರ ಜರ್ಮನಿ ಜೊತೆ ಗಡಿಯನ್ನು ಹಂಚಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದಾರೆ.
ಇರಾನ್-ಪಾಕ್ ಗಡಿ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ವಿವರ ನೀಡುತ್ತಿದ್ದ ಇಮ್ರಾನ್ ಖಾನ್, ಎರಡನೇ ವಿಶ್ವ ಯುದ್ಧದ ಬಳಿಕ ಜರ್ಮನಿ ಮತ್ತು ಜಪಾನ್ ಗಡಿಯಲ್ಲಿ ಕಾರ್ಖಾನೆ ಸ್ಥಾಪಿಸಲಾಗಿತ್ತು ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.
ಅಸಲಿಗೆ ಜರ್ಮನಿ ಮತ್ತು ಫ್ರಾನ್ಸ್ ಹಸೆರು ಉಲ್ಲೇಖಿಸಬೇಕಿದ್ದ ಇಮ್ರಾನ್ ಖಾನ್, ತಪ್ಪಾಗಿ ಜಪಾನ್ ಹೆಸರು ಉಲ್ಲೇಖಿಸಿದ್ದಾರೆ. ಜಪಾನ್ ಮತ್ತ ಜರ್ಮನಿ ದೇಶಗಳು ಗಡಿಯನ್ನೇ ಹಂಚಿಕೊಳ್ಳದಿರುವಾಗ ಇಮ್ರಾನ್ ಖಾನ್ ಅವರ ಭೌಗೋಳಿಕ ಜ್ಞಾನ ಮೆಚ್ಚಲೇಬೇಕು ಎಂದು ನೆಟಿಜನ್ ಗಳು ಕಾಲೆಳೆದಿದ್ದಾರೆ.
ಇನ್ನು ಇಮ್ರಾನ್ ಹೇಳಿಕೆಗೆ ವ್ಯಂಗ್ಯವಾಡಿರುವ ಬಿಲಾವಲ್ ಭುಟ್ಟೋ ಜರ್ದಾರಿ, ಕ್ರಿಕೆಟ್ ಆಡುವವರೆಲ್ಲಾ ಆ ಆಟಕ್ಕಷ್ಟೇ ಲಾಯಕ್ಕು ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.