ಫೇಸ್'ಬುಕ್ಕಲ್ಲಿ ಪಾಕ್ ಹೊಗಳಿ ಬಳಿಕ ಕ್ಷಮೆ ಕೇಳಿದ ಯುವಕ

By Suvarna Web DeskFirst Published Jun 21, 2017, 9:45 AM IST
Highlights

ಐಸಿಸಿ ಚಾಂಪಿಯನ್ಸ್‌ ಕ್ರಿಕೆಟ್‌ ಟ್ರೋಫಿಯಲ್ಲಿ ಭಾರತ ತಂಡವನ್ನು ಸೋಲಿಸಿದ ಪಾಕಿಸ್ತಾನ ತಂಡವನ್ನು ಹೊಗಳಿ ಫೇಸ್‌ಬುಕ್‌ನಲ್ಲಿ ಬರೆದಿದ್ದ ಯುವಕನೊಬ್ಬ ಸಾರ್ವಜನಿಕರ ಪ್ರತಿ ಭಟನೆ ಬಳಿಕ ಪೊಲೀಸರ ಸಮಕ್ಷಮದಲ್ಲಿ ಕ್ಷಮೆ ಕೋರಿದ ಘಟನೆ ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ.

ಬೆಂಗಳೂರು(ಜೂ.21): ಐಸಿಸಿ ಚಾಂಪಿಯನ್ಸ್‌ ಕ್ರಿಕೆಟ್‌ ಟ್ರೋಫಿಯಲ್ಲಿ ಭಾರತ ತಂಡವನ್ನು ಸೋಲಿಸಿದ ಪಾಕಿಸ್ತಾನ ತಂಡವನ್ನು ಹೊಗಳಿ ಫೇಸ್‌ಬುಕ್‌ನಲ್ಲಿ ಬರೆದಿದ್ದ ಯುವಕನೊಬ್ಬ ಸಾರ್ವಜನಿಕರ ಪ್ರತಿ ಭಟನೆ ಬಳಿಕ ಪೊಲೀಸರ ಸಮಕ್ಷಮದಲ್ಲಿ ಕ್ಷಮೆ ಕೋರಿದ ಘಟನೆ ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ.

ತುರುವೇಕೆರೆಯ ಶಮೀಲ್‌ ಅಹಮದ್‌ ಎಂಬಾತ ಭಾನುವಾರ ಪಾಕಿಸ್ತಾನ ತಂಡ ಗೆದ್ದ ಬಳಿಕ ಫೇಸ್‌ಬುಕ್‌ನಲ್ಲಿ ‘ಪಾಕಿಸ್ತಾನ ಮೈ ಲವ್‌, ನನ್ನ ಪಾಕಿಸ್ತಾನದ ಗೆಲುವು. ಇದನ್ನು ಲೈಕ್‌ ಮಾಡಿ' ಎಂದು ಬರೆದು ಕೊಂಡಿದ್ದ.

ಇದನ್ನು ಗಮನಿಸಿದ ಪಟ್ಟಣದ ಜಗದೀಶ್‌ ಬಾಬು ಎಂಬವರು ಸ್ಥಳೀಯ ಪೋಲಿಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಘಟನೆಗೆ ಸಂಬಂಧಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದರಿಂದ ಕೂಡಲೇ ಕಾರ್ಯಪ್ರವೃತ್ತರಾದ ಸಿಪಿಐ ರಾಮಚಂದ್ರಯ್ಯ ಮತ್ತು ಎಸ್‌ಐ ಹೊನ್ನೇಗೌಡ ಯುವಕ ಶಮೀಲ್‌ ಅಹಮದ್‌ನನ್ನು ಹುಡುಕಿ ಪೋಲಿಸ್‌ ಠಾಣೆಗೆ ಕರೆತಂದರು. 
ಘಟನೆಗೆ ಸಂಬಂಧಿಸಿ ಪೊಲೀಸ್‌ ಅಧಿಕಾರಿ ಮತ್ತು ಹಿಂದೂಪರ ಮುಖಂಡರ ಎದುರು ಕ್ಷಮೆ ಯಾಚಿಸಿ ರುವ ಶಮೀಲ್‌ ಅಹಮದ್‌ ‘ಪಾಕ್‌ನ ಕ್ರಿಕೆಟಿಗರು ಸಂಘಟನಾ ಹೋರಾಟ ನಡೆಸಿ ಗೆಲವು ಸಾಧಿಸಿದ್ದನ್ನು ತನಗರಿ ವಿಲ್ಲದೆ ಪ್ರಶಂಸಿಸಿದ್ದು ತಪ್ಪೆಂದು ಅರಿವಾಗಿದೆ.

ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವಲ್ಲ' ಎಂದು ತಿಳಿಸಿದ್ದರಿಂದ ಪ್ರಕರಣಕ್ಕೆ ಇತಿಶ್ರೀ ಹಾಡಲಾಯಿತು.

click me!