
ಇಸ್ಲಾಮಾಬಾದ್: ಜುಲೈ 25 ರಂದು ನಡೆಯಲಿರುವ ಪಾಕಿಸ್ತಾನದ ಸಂಸತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿದಿರುವ ಮಹಮ್ಮದ್ ಹುಸೇನ್ ಶೇಖ್ ಎಂಬಾತ ತಾನು ಭರ್ಜರಿ 3.20 ಲಕ್ಷ ಕೋಟಿ ರು. ಆಸ್ತಿ ಹೊಂದಿ ರುವುದಾಗಿ ಘೋಷಿಸಿದ್ದಾನೆ. ಇದು ಈ ಬಾರಿಯ ಚುನಾವಣೆ ಯಲ್ಲಿ ಕಣಕ್ಕೆ ಇಳಿದಿರುವ ಯಾವುದೇ ಅಭ್ಯರ್ಥಿಗಳಿಗಿಂತ ದೊಡ್ಡ ಮೊತ್ತದ ಆಸ್ತಿ ಘೋಷಣೆಯಾಗಿದೆ.
ಮುಜಫ್ಫರ್‌ನಗರದ ಎನ್‌ಎ- 182 ಮತ್ತು ಪಿಪಿ- ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಹುಸೇನ್, ಇಡೀ ಮುಜ್ಫಫರ್‌ನಗರದಲ್ಲಿ ಶೇ.40 ರಷ್ಟು ಜಾಗ ತನಗೆ ಸೇರಿದ್ದು ಎಂದು ಘೋಷಿಸಿದ್ದಾನೆ. ಇದ ಲ್ಲದೇ ಲಂಗ್‌ಮಲಾನಾ, ತಲಿರಿ, ಚಾಕ್ ತಲಿರಿ ಮತ್ತು ಲಟಕರಣ್ ಪ್ರದೇಶದಲ್ಲೂ ತನಗೆ ಭಾರೀ ಜಮೀನು ಇದೆ.
ಈ ಆಸ್ತಿ 88 ವರ್ಷಗಳಿಂದ ನ್ಯಾಯಾಲಯದಲ್ಲಿ ವಿವಾದಲ್ಲಿತ್ತು. ನ್ಯಾಯಾಲಯವೀಗ ತನ್ನ ಪರವಾಗಿ ತೀರ್ಪು ನೀಡಿದೆ. ಈ ಜಾಗದ ಮೌಲ್ಯ ಅಂದಾಜು 3.30 ಲಕ್ಷ ಕೋಟಿ ರು. ಎಂದು ಘೋಷಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.