ಬಿಜೆಪಿ ಹಣಿಯಲು ಒಂದಾದ ಪಕ್ಷಗಳಿಂದ ಹೊಸ ಒಪ್ಪಂದ

Published : Jun 25, 2018, 10:40 AM IST
ಬಿಜೆಪಿ ಹಣಿಯಲು ಒಂದಾದ ಪಕ್ಷಗಳಿಂದ ಹೊಸ ಒಪ್ಪಂದ

ಸಾರಾಂಶ

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾದಂತೆ ಕಂಡು ಬರುತ್ತಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಮಹತ್ವದ ಒಮ್ಮತವೊಂದಕ್ಕೆ ಬಂದಿವೆ. ಉಭಯ ಪಕ್ಷಗಳ ಅತೃಪ್ತ ನಾಯಕರನ್ನು ಪರಸ್ಪರ ಸೆಳೆದುಕೊಳ್ಳದಿರಲು ಅವು ನಿರ್ಧರಿಸಿವೆ.   

ಲಖನೌ: 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾದಂತೆ ಕಂಡು ಬರುತ್ತಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಮಹತ್ವದ ಒಮ್ಮತವೊಂದಕ್ಕೆ ಬಂದಿವೆ. ಉಭಯ ಪಕ್ಷಗಳ ಅತೃಪ್ತ ನಾಯಕರನ್ನು ಪರಸ್ಪರ ಸೆಳೆದುಕೊಳ್ಳದಿರಲು ಅವು ನಿರ್ಧರಿಸಿವೆ. 

ಬಿಎಸ್ ಪಿ ಯಾವುದೇ ವ್ಯಕ್ತಿ ಬಂಡೆದ್ದರೆ ಅವರನ್ನು ಸಮಾಜವಾದಿ ಪಕ್ಷಕ್ಕೆ ಸೇರಿಸಿಕೊಳ್ಳ ಬಾರದು. ಅದೇ ರೀತಿ ಸಮಾಜವಾದಿ ಪಕ್ಷದಿಂದ  ಬಂಡೆದ್ದರೆ ಅವರನ್ನು ಬಿಎಸ್‌ಪಿಗೆ ಸೇರಿಸಿಕೊಳ್ಳಬಾರದು. ವಿಶ್ವಾಸವೃದ್ಧಿಗಾಗಿ ಈ ಕ್ರಮಕ್ಕೆ ಕೈಹಾಕಬೇಕು ಎಂದು ಉಭಯ ಪಕ್ಷಗಳು ನಿರ್ಧರಿಸಿವೆ. 

ಇದರ ಬೆನ್ನಲ್ಲೇ ಉಭಯ ಪಕ್ಷಗಳ ಕಾರ್ಯಕರ್ತರು ಪರಸ್ಪರರ ಪಕ್ಷಕ್ಕೆ ಪಕ್ಷಾಂತರ ನಿಲ್ಲಿಸಿದ್ದಾರೆ ಎಂದು ಸಮಾಜವಾದಿ ಪಾರ್ಟಿ ವಕ್ತಾರ  ರಾಜೇಂದ್ರ ಚೌಧರಿ ತಿಳಿಸಿದ್ದಾರೆ. 2019 ರಲ್ಲಿ ಬಿಜೆಪಿ ಮಣಿಸಲು ಮೈತ್ರಿ ಅನಿವಾರ್ಯ ಎಂದು ಬಿಎಸ್‌ಪಿ-ಎಸ್ಪಿ ಮನಗಂಡಿವೆ. ಅದಕ್ಕೆಂದೇ ಅವು ವಿಶ್ವಾಸವೃದ್ಧಿ ಕ್ರಮಕ್ಕೆ ಮುಂದಾಗಿವೆ. ಇತ್ತೀಚಿನ ಫೂಲ್‌ಪುರ, ಗೋರಖಪುರ ಹಾಗೂ ಕೈರಾನಾ ಲೋಕಸಭಾ ಉಪಚುನಾವಣೆಗಳಲ್ಲಿ ಎಸ್‌ಪಿ-ಬಿಎಸ್‌ಪಿ ಹಾಗೂ ಆರ್‌ಎಲ್‌ಡಿ ಮೈತ್ರಿಕೂಟ ಜಯಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?