ಬಯಲಾಯ್ತು ಕಿಚ್ಚನ ಪೈಲ್ವಾನ್ ರಹಸ್ಯ!

Published : Sep 20, 2017, 10:10 AM ISTUpdated : Apr 11, 2018, 12:35 PM IST
ಬಯಲಾಯ್ತು ಕಿಚ್ಚನ ಪೈಲ್ವಾನ್ ರಹಸ್ಯ!

ಸಾರಾಂಶ

ನಿರ್ದೇಶಕ ಕೃಷ್ಣ ಅವರು ತಮ್ಮ ‘ಪೈಲ್ವಾನ್’ ಚಿತ್ರವನ್ನು ಶತಾಯಗತಾಯ ಅಕ್ಟೋಬರ್ ಮೊದಲ ವಾರದಲ್ಲೇ ಚಿತ್ರೀಕರಣ ಶುರು ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಟ ಸುದೀಪ್ ಅವರ ಸ್ಟ್ ಲುಕ್ ಬಿಡುಗಡೆ ಮಾಡಿ ಟ್ರೆಂಡ್ ಹುಟ್ಟು ಹಾಕಿದ ಕೃಷ್ಣ, ಈಗ ‘ಪೈಲ್ವಾನ್’ ಚಿತ್ರದ ಶೂಟಿಂಗ್ ಲೊಕೇಷನ್ ಹಾಗೂ ಕಲಾವಿದರ ಆಯ್ಕೆಯಲ್ಲಿ ತೊಡಗಿದ್ದಾರೆ. ಆದರೆ, ಚಿತ್ರದಲ್ಲಿ ಸುದೀಪ್ ಅವರಿಗೆ ಯಾರು ನಾಯಕಿ ಎನ್ನುವ ಪ್ರಶ್ನೆಗೆ ಇನ್ನೂ ಕೃಷ್ಣ ಅವರಿಗೂ ಉತ್ತರ ಸಿಕ್ಕಿಲ್ಲ.

ಸದ್ಯ ಕೃಷ್ಣ ಅವರು ಹುಡುಕಾಟ ಶುರು ಮಾಡಿದ್ದಾರೆ. ‘ಮಾಮೂಲಿ ಸ್ಟಾರ್ ನಟರ ಚಿತ್ರಗಳ ನಾಯಕಿ ಪಾತ್ರದಂತೆ ಇಲ್ಲಿ ನಾಯಕಿ ಇರಲ್ಲ. ಕತೆಯ ಭಾಗವಾಗಿಯೇ ನಾಯಕಿ ಪಾತ್ರ. ನಟನೆಗೆ ಸ್ಕೋಪ್ ಇರುವ ಪಾತ್ರ. ಹೀಗಾಗಿ ಸಮಯ ತೆಗೆದುಕೊಂಡು ಹುಡುಕುತ್ತಿದ್ದೇವೆ. ಒಂದಿಷ್ಟು ನಟಿಯರನ್ನು ಈಗಾಗಲೇ ಸಂಪರ್ಕಿಸಿದ್ದು, ಅವರ ಡೇಟ್ಸ್, ನಮ್ಮ ಡೇಟ್ಸ್ ಹೊಂದಾಣಿಕೆಯಾದರೆ, ಒಂದೇ ವಾರದಲ್ಲಿ ‘ಪೈಲ್ವಾನ್’  ನಾಯಕಿ ಯಾರೆಂಬುದು ಗೊತ್ತಾಗಲಿದೆ’ ಎನ್ನುತ್ತಾರೆ ಕೃಷ್ಣ.

-ಕರುಣಾಕರ್ ಕ್ಯಾಮರಾ, ಅರ್ಜುನ್ ಜನ್ಯ ಸಂಗೀತ, ರವಿವರ್ಮ ಸಾಹಸ ಸಂಯೋಜನೆಯ ಚಿತ್ರವಿದು. ಬಹುತೇಕ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ. 

-ಕೆಲವು ಬಾಕ್ಸಿಂಗ್ ದೃಶ್ಯಗಳು ಸೇರಿದಂತೆ ಕ್ಲೆ‘ಮ್ಯಾಕ್ಸ್ ಫೈಟ್‌'ಗೆ ಮಾತ್ರ ವಿದೇಶಕ್ಕೆ ಹೋಗಲಿದೆ ಚಿತ್ರತಂಡ. 

-ಎರಡು ಪ್ರಸಿದ್ಧ ಕ್ರೀಡಾ ಸಂಸ್ಥೆಗಳ ಜತೆ ಮಾತುಕತೆ  ಮಾಡಿದ್ದು, ಅವರು ಸುದೀಪ್ ಅವರಿಗೆ ತರಬೇತಿ ನೀಡುವುದಕ್ಕೆ ಬರಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ