3 ನೇ ಮಹಾಯುದ್ಧ ತಪ್ಪಿಸಿದ್ದ ರಷ್ಯಾದ ಸೇನಾಧಿಕಾರಿ ನಿಧನ

Published : Sep 20, 2017, 09:55 AM ISTUpdated : Apr 11, 2018, 12:57 PM IST
3 ನೇ ಮಹಾಯುದ್ಧ ತಪ್ಪಿಸಿದ್ದ ರಷ್ಯಾದ ಸೇನಾಧಿಕಾರಿ ನಿಧನ

ಸಾರಾಂಶ

ಅಮೆರಿಕದೊಂದಿಗೆ ಸಂಭಾವ್ಯ ಅಣ್ವಸ್ತ್ರ ಸಮರ ಹಾಗೂ ಮೂರನೇ ಜಾಗತಿಕ ಯುದ್ಧ ತಪ್ಪಿಸಿ, ಜಗತ್ತನ್ನೇ ರಕ್ಷಿಸಿದ್ದ ಸೋವಿಯತ್ ಸೇನಾಧಿಕಾರಿ ಸ್ಟಾನಿಸ್ಲಾವ್ ಪೆಟ್ರೋವ್ ನಿಧನರಾಗಿದ್ದಾರೆ

ಮಾಸ್ಕೊ(ಸೆ.20): ಅಮೆರಿಕದೊಂದಿಗೆ ಸಂಭಾವ್ಯ ಅಣ್ವಸ್ತ್ರ ಸಮರ ಹಾಗೂ ಮೂರನೇ ಜಾಗತಿಕ ಯುದ್ಧ ತಪ್ಪಿಸಿ, ಜಗತ್ತನ್ನೇ ರಕ್ಷಿಸಿದ್ದ ಸೋವಿಯತ್ ಸೇನಾಧಿಕಾರಿ ಸ್ಟಾನಿಸ್ಲಾವ್ ಪೆಟ್ರೋವ್ ನಿಧನರಾಗಿದ್ದಾರೆ.

1983ರ ಸೆಪ್ಟೆಂಬರ್‌ನಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಗುಪ್ತಚರ ವಿಭಾಗದಲ್ಲಿ ಪೆಟ್ರೋವ್ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಅಮೆರಿಕ ಖಂಡಾಂತರ ಕ್ಷಿಪಣಿಯೊಂದನ್ನು ರಷ್ಯಾದತ್ತ ಪ್ರಯೋಗಿಸಿದೆ ಎಂಬ ಸಂದೇಶ ರವಾನೆಯಾಗಿತ್ತು. ಈ ಕ್ಷಿಪಣಿ ದಾಳಿ ತಡೆಯಲು ರಷ್ಯಾ ಕೂಡಾ ಕೆಲವೇ ನಿಮಿಷಗಳಲ್ಲಿ ಪ್ರತಿ ದಾಳಿ ನಡೆಸಬೇಕಿತ್ತು. ಆದರೆ ಈ ಸಂದೇಶದ ನಿಖರತೆ ಬಗ್ಗೆ ಪೆಟ್ರೋವ್ ಅನುಮಾನ ವ್ಯಕ್ತಪಡಿಸಿ, ಪ್ರತಿದಾಳಿಯ ಸಾಧ್ಯತೆಯಿಂದ ಹಿಂದೆ ಸರಿದಿದ್ದರು. ಕೊನೆಗೆ ಅದು ತಪ್ಪು ಸಂದೇಶ ಎಂಬುದು ಖಚಿತವಾಗಿತ್ತು. ಒಂದು ವೇಳೆ ಆ ಸುದ್ದಿಯನ್ನು ನಂಬಿ ಪೆಟ್ರೋವ್, ಪ್ರತಿದಾಳಿಗೆ ಆದೇಶಿಸಿದ್ದೇ ಆಗಿದ್ದಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಮೂರನೇ ಮಹಾಯುದ್ಧ ಆರಂ‘ವಾಗುತ್ತಿತ್ತು.

ಹೀಗಾಗಿಯೇ ಪೆಟ್ರೋಟವ್ ಅವರನ್ನು ಹೀರೋ ಎಂದು ಪರಿಗಣಿಸಲಾಗುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

International Yoga day: 5000 ವರ್ಷಗಳ ಇತಿಹಾಸವಿರುವ ಯೋಗದಲ್ಲಿ ಅಡಗಿದೆ ರಹಸ್ಯ, ಇದು ತಿಳಿದವರೇ ಸುಖಿ, ಆರೋಗ್ಯವಂತರು!
Prakash Raj in Trouble: ನಟ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಇದೀಗ ಬಂಧನದ ಭೀತಿ!