ಯುಪಿ ರೈತನಿಗೆ 1 ಲಕ್ಷ ರು. ಅಲ್ಲ, 1 ಪೈಸೆ ಸಾಲ ಮನ್ನಾ!

By Suvarna Web DeskFirst Published Sep 20, 2017, 9:49 AM IST
Highlights

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಮಹತ್ವಾಕಾಂಕ್ಷಿ ರೈತರ ಸಾಲ ಮನ್ನಾ ಯೋಜನೆ ಮತ್ತೊಮ್ಮೆ ಅಪಹಾಸ್ಯಕ್ಕೆ ಗುರಿಯಾಗಿದೆ.

ಮಥುರಾ(ಸೆ.20): ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಮಹತ್ವಾಕಾಂಕ್ಷಿ ರೈತರ ಸಾಲ ಮನ್ನಾ ಯೋಜನೆ ಮತ್ತೊಮ್ಮೆ ಅಪಹಾಸ್ಯಕ್ಕೆ ಗುರಿಯಾಗಿದೆ.

ಮಥುರಾದಲ್ಲಿ ಛಿಡ್ಡಿ ಎಂಬ ರೈತ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 1.50 ಲಕ್ಷ ರು. ಸಾಲ ಮಾಡಿದ್ದು, ಯೋಜನೆಯಂತೆ 1 ಲಕ್ಷ ರು. ಸಾಲ ಮನ್ನಾಕ್ಕೆ ಅರ್ಹನಾಗಿದ್ದಾನೆ. ಆದರೆ, ಸರ್ಕಾರ ಒಂದು ಲಕ್ಷದ ಬದಲು ಒಂದು ಪೈಸೆ ಸಾಲ ಮಾನ್ನಾ ಮಾಡಿರುವುದಾಗಿ ಪ್ರಮಾಣಪತ್ರ ನೀಡಿದೆ. ತಾಂತ್ರಿಕ ದೋಷದಿಂದ ಈ ಪ್ರಮಾದ ಆಗಿರುವ ಸಾಧ್ಯತೆ ಇದೆ ಎಂದು ಮಥುರಾ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

Latest Videos

ಆದರೆ, ಆಧಾರ್ ಲಿಂಕ್ ಆಗಿದ್ದ ಛಿಡ್ಡಿಯ ಬ್ಯಾಂಕ್ ಖಾತೆಯಲ್ಲಿ ಪೈಸೆ ಬಡ್ಡಿಯನ್ನು ಬಾಕಿ ಉಳಿಸಿಕೊಂಡಿದ್ದು, ಹೀಗಾಗಿ ಆತನ ಹೆಸರು ಲಾನುಭವಿಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಆತ ಬೇರೆ ಖಾತೆಯ ಮೂಲಕ ಸಾಲ ಪಡೆದಿದ್ದಾನೆಯೇ ಎನ್ನುವುದನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್‌'ನಲ್ಲಿ ಸಿಎಂ ಯೋಗಿ ಆದಿತ್ಯನಾಥ್, ರೈತರ 36 ಸಾವಿರ ಕೋಟಿ ರು. ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದ್ದರು.

 

click me!