
ಹೈದರಾಬಾದ್(ಜ.20): ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರಕ್ಕೆ ಸುಪ್ರೀಂಕೋರ್ಟ್ ನಿಷೇಧ ತೆರವುಗೊಳಿಸಿದ ಬೆನ್ನಲ್ಲೇ ಮತ್ತೊಂದು ವಿಘ್ನ ಎದುರಾಗಿದೆ. ಪದ್ಮಾವತ್ ಒಂದು ಕಳಪೆ ಚಿತ್ರ ಎಂದು ಹೇಳಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಚಿತ್ರ ವೀಕ್ಷಿಸದಂತೆ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ವಾರಂಗಲ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಒವೈಸಿ, ‘ಚಿತ್ರ ವೀಕ್ಷಿಸಲು ಹೋಗಬೇಡಿ. ಎರಡು ತಾಸಿನ ಚಿತ್ರ ನೋಡಲೆಂದು ದೇವರು ನಿಮ್ಮನ್ನು ಸೃಷ್ಟಿಸಿಲ್ಲ. ಚಿತ್ರ ಕಳಪೆಯಾಗಿದೆ. ನಾವು ರಜಪೂತರನ್ನು ನೋಡಿ ಕಲಿಯಬೇಕು. ಅವರು ಒಗ್ಗಟ್ಟಾಗಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಹೇಳಿದ್ದಾರೆ.
ಸೆನ್ಸಾರ್ ಸರ್ಟಿಫಿಕೇಟ್ ರದ್ದತಿ ಕೋರಿದ್ದ ಅರ್ಜಿ ತಿರಸ್ಕಾರ
‘ಪದ್ಮಾವತ್’ಗೆ ನೀಡಿರುವ ಸೆನ್ಸಾರ್ ಪ್ರಮಾಣ ಪತ್ರ ರದ್ದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಚಿತ್ರ ಪ್ರದರ್ಶನದಿಂದ ಗಂಭೀರ ಜೀವ ಬೆದರಿಕೆ ಬರಬಹುದು, ಆಸ್ತಿಪಾಸ್ತಿಗೆ ಹಾನಿಯಾಗಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಉದ್ಯೋಗವಲ್ಲ ಎಂದ ಕೋರ್ಟ್ ಅರ್ಜಿ ವಜಾಗೊಳಿಸಿತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.