ತುಮಕೂರಿನ ಜಯನಗರದ ಮನೆಗೆ ನುಗ್ಗಿದ ಚಿರತೆ : ಶೌಚಾಲಯದಲ್ಲಿ ಅಡಗಿ ಕುಳಿತ ಅತ್ತೆ, ಸೊಸೆ

By Suvarna Web DeskFirst Published Jan 20, 2018, 3:14 PM IST
Highlights

ಚಿರತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಂಗನಾಥವರ ಪತ್ನಿ ವನಜಾಕ್ಷಿ ಹಾಗೂ ಸೊಸೆ ವಿನೂತಾ ಶೌಚಾಲಯದಲ್ಲಿ ಅಡಗಿ ಕುಳಿತ್ತಿದ್ದರು.

ತುಮಕೂರು ನಗರದ ಜಯನಗರದ ಮನೆಯೊಂದರಲ್ಲಿ ಚಿರತೆ ನುಗ್ಗಿದ್ದು ಬಡಾವಣೆಯ ಜನರಲ್ಲಿ ಆತಂಕ ಸೃಷಿಸಿದೆ. ರಂಗನಾಥ ಎನ್ನುವವರ ಮನೆಗೆ  ಬೆಳಗ್ಗೆ 8 ಗಂಟೆಗೆ ಸುಮಾರು ಚಿರತೆ ಏಕಾಏಕಿಯಾಗಿ ನುಗ್ಗಿದೆ.

ಚಿರತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಂಗನಾಥವರ ಪತ್ನಿ ವನಜಾಕ್ಷಿ ಹಾಗೂ ಸೊಸೆ ವಿನೂತಾ ಶೌಚಾಲಯದಲ್ಲಿ ಅಡಗಿ ಕುಳಿತ್ತಿದ್ದರು. ಈ ಮಧ್ಯೆ ಚಿರತೆ ಸೆರೆ ಹಿಡಿಯಲು ಬಂದ ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ವಾಚರ್ ಗೋವಿಂದರಾಜು ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಸದ್ಯ ಚಿರತೆ ಮನೆಯಲ್ಲಿನ ಹಾಲ್ ನಲ್ಲಿ ಠಿಕಾಣಿ ಹೂಡಿದ್ದರೆ ಮನೆಯ ಇಬ್ಬರು ಸದಸ್ಯರು ಶೌಚಾಲಯಲ್ಲಿ ಬಂಧಿಯಾಗಿದ್ದಾರೆ.  ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಜಯನಗರ ಪೊಲೀಸರು ಸ್ಥಳಕ್ಕ ಬಂದು ಕಾರ್ಯಾಚರಣೆ ನಡೆಸುತ್ತಿದ್ದು, ಚಿರತೆ ಬಂದ ಸುದ್ದಿ ತಿಳಿಯುತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಸುತ್ತುವರೆದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸ ಸಾಹಸ ಪಡುತ್ತಿದ್ದಾರೆ.

ಸದ್ಯ ಚಿರತೆ ಹಿಡಿಯುವ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಸಂಜೆಗೆ ಮುಂದೂಡಲಾಗಿದೆ. ಗೋಡೆ ಹೊಡೆದು ಮನೆಯ ಶೌಚಾಲಯದಲ್ಲಿದ್ದ ಅತ್ತೆ, ಸೊಸೆಯನ್ನು ಕರೆತರಲಾಗಿದೆ.

click me!