
ಹೇಳಿ ಕೇಳಿ ನಾವು ಹಠವಾದಿಗಳು ಯಾವುದೋ ಬೀದಿಯಲ್ಲಿರು ನಾಯಿಗಳು ಕೂಗಿದ್ರೇ, ನಮ್ಮ ಉದ್ದೇಶ ಬದಲಾಗಲ್ಲ ಎಂದು ಕೇಂದ್ರ ಸಚಿವ ಆನಂತ ಕುಮಾರ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಬಳ್ಳಾರಿಯಲ್ಲಿಂದು ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯುವಕರಿಗೆ ಸ್ಕೀಲ್ ಡೆವಲಪ್ಮಿಂಟ್ ಬಗ್ಗೆ ಮಾತನಾಡವ ಭರದಲ್ಲಿ ಮತ್ತಮ್ಮೆ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಸಚಿವರನ್ನು ದಲಿತಪರ ಸಂಘಟನೆಗಳು ಮುತ್ತಿಗೆ ಹಾಕಿದ್ದರು ಇದು ಅವರನ್ನು ಉದ್ದೇಶಿಸಿ ಹೇಳಿರುವೋದು ಅಥವಾ ಇನ್ನಾರನ್ನು ಓಲೈಸಲು ಹೇಳಿದರೋ ಗೊತ್ತಿಲ್ಲ ಒಟ್ಟಿನಲ್ಲಿ ಮತ್ತೊಮ್ಮೆ ವೇದಿಕೆಯಲ್ಲಿ ಸಚಿವರು ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ನಾವಿಲ್ಲಿ ಮತ ಕೇಳಲು ಬಂದಿಲ್ಲ. ರಾಜಕೀಯ ಮಾಡಲು ಬಂದಿಲ್ಲ. ಅದೆಲ್ಲದಕ್ಕೂ ಬೇರೆಯೇ ವೇದಿಕೆಗಳಿವೆ. ನಾವೀಗ ಬಂದಿರೋದು ದೇಶ ಕಟ್ಟಲು ಎಂದರು.
ಇನ್ನೂ ನಮ್ಮ ಭಾಷೆ ಮೇಲೆ ಗೌರವವಿರಲಿ ದೇಶದ ಯಾವುದೇ ಭಾಷೆಯ ಮಾತನಾಡಿ ಆದರೆ, ಯಾವೊದೋ ವ್ಯಕ್ತಿ ಮೆಚ್ಚಿಸಲು ನಮ್ಮ ತಾಯಿ ಭಾಷೆಯನ್ನು ಬೇವರ್ಸಿ ಯನ್ನಾಗಿ ಯಾಕೆ ಮಾಡಬೇಕು. ನಮ್ಮ ದೇಶದ ದೌರ್ಬಗ್ಯ ಎಷ್ಟಿದೆ ಅಂದ್ರೇ, ಕೆಲವೆಡೆ ಇಂಗ್ಲಿಷ್ ಅನಿವಾರ್ಯವಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.