ಪಿ.ಚಿದಂಬರಂ ಮೇಲೆ ಆರೋಪಪಟ್ಟಿ ದಾಖಲಿಸಿದ ಸಿಬಿಐ

By Web DeskFirst Published Jul 19, 2018, 5:28 PM IST
Highlights
  • ಚಿದಂಬರಂ ಒಳಗೊಂಡಂತೆ  17 ಮಂದಿಯ ಹೆಸರು ಆರೋಪಪಟ್ಟಿಯಲ್ಲಿ ದಾಖಲಾಗಿದೆ
  • 2006ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಏರ್ ಸೆಲ್ - ಮ್ಯಾಕ್ಸಿಸ್ ಒಪ್ಪಂದಕ್ಕೆ ಪ್ರಮಾಣ ಪತ್ರ ನೀಡಲಾಗಿತ್ತು

ನವದೆಹಲಿ[ಜು.19]: ಕೇಂದ್ರೀಯ ತನಿಖಾ ದಳ ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ದೆಹಲಿ ಪಾಟಿಯಾಲ ಹೌಸ್ ಕೋರ್ಟ್'ಗೆ  ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ.

ಚಿದಂಬರಂ ಒಳಗೊಂಡಂತೆ  ಸರ್ಕಾರಿ ಅಧಿಕಾರಿಗಳು ಸೇರಿ 17 ಮಂದಿಯ ಹೆಸರು ಆರೋಪಪಟ್ಟಿಯಲ್ಲಿ ದಾಖಲಾಗಿದೆ. ವಿದೇಶಿ ಹೂಡಿಕೆ ಪ್ರಚಾರ ಮಂಡಳಿಯಲ್ಲಿ ಹಣ ಹೂಡಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ದಾಖಲಿಸಲಾಗಿದೆ.

ಈಗಾಗಲೇ ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಚಿದಂಬರಂ ಪುತ್ರ ಕಾರ್ತಿ ಚಿದಬರಂ ಹೆಸರನ್ನು ದಾಖಲಿಸಲಾಗಿದೆ. ಕಾರ್ತಿ ಅವರನ್ನು ಫೆ.28ರಂದು ಬಂಧಿಸಲಾಗಿದ್ದು ಜಾಮೀನಿನ ಮೇಲೆ ಹೊರಗಿದ್ದಾರೆ.  

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಚಿದಂಬರಂ ಅವರು 2006ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಏರ್ ಸೆಲ್ - ಮ್ಯಾಕ್ಸಿಸ್ ಒಪ್ಪಂದದಲ್ಲಿ  ವಿದೇಶಿ ಹೂಡಿಕೆ ಪ್ರಮಾಣಪತ್ರ ನೀಡಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ.

click me!