ಸತ್ಯ ಹೊರ ಬರುವ ತವಕ: ಚಿದಂಬರಂ ಸಿಬಿಐ ಕಸ್ಟಡಿ ಸೆ.05ರ ತನಕ!

By Web Desk  |  First Published Sep 3, 2019, 6:28 PM IST

ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕಣ| ಚಿದಂಬರಂ ಸಿಬಿಐ ಕಸ್ಟಡಿ ಕಸ್ಟಡಿ ಅವಧಿ ಸೆ.05ರವೆರೆಗೆ ವಿಸ್ತರಣೆ| ಕಸ್ಟಡಿ ಅವದಿ ಸೆ.05ರವೆರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ| ಸೆ.05ರ ಬಳಿಕ ಚಿದಂಬರಂ ಅವರನ್ನು ಇಡಿ ವಶಕ್ಕೆ ಪಡೆಯುವ ಸಾಧ್ಯತೆ|


ನವದೆಹಲಿ(ಸೆ.03): ಐಎನ್ಎಕ್ಸ್ ಮೀಡಿಯಾ ಹಗರಣದ ಪ್ರಮುಖ ಆರೋಪಿ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ಕಸ್ಟಡಿ ಅವಧಿಯನ್ನು ಸೆ.05ರವೆರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸಿಬಿಐ ತಮ್ಮನ್ನು ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸೆಪ್ಟೆಂಬರ್ 5ರವರೆಗೆ ಚಿದಂಬರಂಗೆ ಸಿಬಿಐ ಕಸ್ಟಡಿ ಅವಧಿ ವಿಸ್ತರಿಸಿದೆ.

CBI tells Supreme Court that it does not want any further custody of Congress leader and he should be sent to Tihar under judicial custody. Supreme Court directs Congress leader P Chidambaram to remain in CBI custody till September 5. (File pic) pic.twitter.com/8lrNSHpVpI

— ANI (@ANI)

Tap to resize

Latest Videos

ಇದೇ ವೇಳೆ ಸೆ.೦5ರಂದು ಸುಪ್ರೀಂಕೋರ್ಟ್ ಒಂದು ವೇಳೆ ಜಾಮೀನು ಮಂಜೂರು ಮಾಡಿದರೆ, ಚಿದಂಬರಂ ಅವರನ್ನುಜರಿ ನಿರ್ದೇಶನಾಲಯ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಚಿದಂಬರಂ ಅವರ 15 ದಿನಗಳ ಕಸ್ಟಡಿ ಸೆಪ್ಟೆಂಬರ್ 5ಕ್ಕೆ ಕೊನೆಗೊಳ್ಳಲಿದ್ದು, ಮಧ್ಯಂತರ ಜಾಮೀನು ಅರ್ಜಿಯ ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನಿಗಾಗಿ ಒತ್ತಾಯಿಸದಿರಲು ಚಿದಂಬರಂ ಪರ ವಕೀಲರು ಒಪ್ಪಿದ್ದಾರೆ.

click me!