
ಹೈದರಾಬಾದ್ (ಅ. 04): ಬ್ರಿಟನ್‌ನ ನಾಟ್‌ವೆಸ್ಟ್ ಬ್ಯಾಂಕ್‌ನಲ್ಲಿರುವ ಹೈದರಾಬಾದ್ ನಿಜಾಮರಿಗೆ ಸೇರಿದ 305 ಕೋಟಿ ರು. ಯಾರಿಗೆಲ್ಲಾ ಹಂಚಿಕೆಯಾಗಬೇಕು ಎಂಬುದರ ಬಗ್ಗೆ ಭಾರತ ಸರ್ಕಾರ ಮತ್ತು ನಿಜಾಮ ವಂಶಸ್ಥರ ನಡುವೆ ರಹಸ್ಯ ಒಪ್ಪಂದ ಏರ್ಪಟ್ಟಿತ್ತು ಎಂಬ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಆದರೆ, ಈ ಪ್ರಕಾರ ಭಾರತ ಸರ್ಕಾರಕ್ಕೆ ಎಷ್ಟುಪಾಲು ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ನಿಜಾಮರ ಕುಟುಂಬಕ್ಕೆ ಸಿಗುವ ಪಾಲಿನಲ್ಲಿ 120 ಮಂದಿ ಹಂಚಿಕೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್ ನಿಜಾಮ ಆಸಫ್ ಝಾ 1948ರಲ್ಲಿ ಲಂಡನ್ ಬ್ಯಾಂಕ್ ಶಾಖೆಯಲ್ಲಿನ ಪಾಕ್ ರಾಯಭಾರಿ ಖಾತೆಗೆ ಸುಮಾರು 7 ಕೋಟಿ ರು. ವರ್ಗಾಯಿಸಿದ್ದರು. ಆದರೆ, ಕೆಲವು ದಿನಗಳ ಬಳಿಕ ಗೊತ್ತಿಲ್ಲದೆ ಹಣ ವರ್ಗಾವಣೆಯಾಗಿದ್ದು, ವಾಪಸ್ ನೀಡಲು ಪಾಕ್‌ಗೆ ಕೋರಲಾಗಿತ್ತು. ಆದರೆ, ಪಾಕ್ ನಿರಾಕರಿಸಿತ್ತು. ಆ ಬಳಿಕ ಏರ್ಪಟ್ಟಕಾನೂನು ಹೋರಾಟದಲ್ಲಿ ಇದೀಗ ತೀರ್ಪು ಭಾರತದ ಪರ ಬಂದಿದೆ. ಬ್ಯಾಂಕ್ ಬಡ್ಡಿಯ ಪರಿಣಾಮ ಆಗ ಇಡಲಾಗಿದ್ದ 7 ಕೋಟಿ ರು. ಇದೀಗ 305 ಕೋಟಿ ರು. ಆಗಿ ಪರಿವರ್ತನೆಯಾಗಿದೆ.
ಈ ಬಗ್ಗೆ ಮಾತನಾಡಿದ ನಗರದ ಇತಿಹಾಸಕಾರರೊಬ್ಬರು, ಪ್ರಕರಣವು ಭಾರತಕ್ಕೆ 305 ಕೋಟಿ ರು.ನ ಅಳಿವು-ಉಳಿವಿನ ಪ್ರಶ್ನೆಯಾಗಿರಲಿಲ್ಲ. ಆದರೆ, ಪಾಕಿಸ್ತಾನದ ವಿರುದ್ಧ ಜಯಿಸಲೇಬೇಕು ಎಂಬ ಪ್ರತಿಷ್ಠೆಯಾಗಿತ್ತಷ್ಟೇ. ಆದರೆ, ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ನಿಜಾಮ ಕುಟುಂಬಸ್ಥರಿಗೆ ಬುಧವಾರದ ತೀರ್ಪು ಒಂದು ಜಾಕ್‌ಪಾಟ್ ಆಗಿಯೇ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.