ಕರ್ನಾಟಕದ ಆಶ್ರಮವೊಂದರಲ್ಲಿವೆ ಅಯೋಧ್ಯೆ ರಾಮ-ಲಕ್ಷ್ಮಣ, ಸೀತಾ ಅಸಲಿ ವಿಗ್ರಹ!

By Web Desk  |  First Published Nov 25, 2019, 12:00 AM IST

ಅಯೋಧ್ಯೆ ಶ್ರೀರಾಮನ ಮೂರ್ತಿ ಕರ್ನಾಟಕದಲ್ಲಿ?/ ಹರಿಹರದ ಆಶ್ರಮವೊಂದರಲ್ಲಿದೆ ಶ್ರೀರಾಮನ ಮೂರ್ತಿ/ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ  ಸುದ್ದಿಯ ಅಸಲಿಯತ್ತು ಏನು?


ಬೆಂಗಳೂರು[ನ. 24] ಸುಪ್ರೀಂ ಕೋರ್ಟ್ ಮಹತ್ವದ ಅಯೋಧ್ಯೆ ಐತಿಹಾಸಿಕ ತೀರ್ಪು ನೀಡಿದೆ. ಆದರೆ ಅಯೋಧ್ಯೆ ಮತ್ತು ರಾಮಮಂದಿರಕ್ಕೆ ಸಂಬಂಧಿಸಿದ ವಿಚಾರಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಕೊನೆ ಇಲ್ಲ.

ಶ್ರೀರಾಮ, ಸೀತಾ ಹಾಗೂ ಲಕ್ಷ್ಮಣರ ವಿಗ್ರಹವನ್ನು ರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಶಿಫ್ಟ್ ಮಾಡಲಾಗಿದೆ ಎಂಬ ಸುದ್ದಿ  ಒಂದು ಕಡೆ, ನೂರಾರು ವರ್ಷಗಳ ಹಿಂದೆ ಬಾಬರನ ದಾಳುಗೆ ಹೆದರಿ ಮೂರ್ತಿಗಳನ್ನು ಕರ್ನಾಟಕಕ್ಕೆ ತಂದಿಡಲಾಗಿದೆ ಎಂಬ ಸುದ್ದಿ ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಸಮೇತ ಹರಿದಾಡುತ್ತಿದೆ.

Tap to resize

Latest Videos

undefined

ಅಯೋಧ್ಯೆ ತೀರ್ಪು ಹೇಳಿದ ಕರ್ನಾಟಕದ ನ್ಯಾಯಮೂರ್ತಿ

ತುಂಗಭದ್ರಾ ನದಿಯ ದಂಡೆಯಲ್ಲಿರುವ ಕರ್ನಾಟಕದ ಹರಿಹರದ ನಾರಾಯಣ ಆಶ್ರಮದಲ್ಲಿ ಈ ವಿಗ್ರಹಗಳನ್ನು ಸ್ವಾಮೀಜಿಯೊಬ್ಬರು ನೂರಾರು ವರ್ಷಗಳ ಹಿಂದೆಯೇ ತಂದು  ಇಟ್ಟಿದ್ದಾರೆ ರಾಮಮಂದಿರ ನಿರ್ಮಾಣ ಆಗುವವರೆಗೂ ಅಲ್ಲಿಯೇ ಇರುತ್ತದೆ ಎಂಬ ಮಾತು ಹರಿದ್ದಾಡುತ್ತಿದೆ. ಹಾಗಾದರೆ ಸತ್ಯಾಸತ್ಯತೆ ಏನು? ಈ ಫೋಟೋಗಳು ಬಂದಿದ್ದಾದರೂ ಎಲ್ಲಿಂದ?

ದಾವಣಗೆರೆ ಜಿಲ್ಲೆಯ ಹರಿಹರದ ಸದ್ಗುರು ನಾರಾಯಣ ಮಹಾರಾಜ್ ಆಶ್ರಮದ ಪೋಟೋಗಳೇ ಹರಿದಾಡುತ್ತಿರುವುದು. ಆದರೆ ಮೊಘಲರ ಕಾಲದಲ್ಲಿ ವಿಗ್ರಹಗಳನ್ನು ಇಲ್ಲಿಗೆ ತಂದು ಇಡಲಾಯಿತೆ ಎಂಬುದರ ಬಗ್ಗೆ ಯಾವುದೇ ದಾಖಲೆ ಇಲ್ಲ. ಹರಿದಾಡುತ್ತಿರುವ ಪೋಟೋಗಳನ್ನು ವೆಬ್ ತಾಣವೊಂದರಿಂದ ತೆಗೆದುಕೊಂಡಿರುವುದು ಪತ್ತೆಯಾಗಿದೆ. ಚಿನ್ಮಯ್ ಎಂ ರಾವ್ ಎಂಬುವವರು ಈ ಪೋಟೋ ತೆಗೆದಿದ್ದಾರೆ ಎಂಬ ಮಾಹಿತಿಯೂ ಇದೆ.

ಇದು ಲೋಹದ ಮೂರ್ತಿಯಾಗಿದ್ದು ಅಬ್ಬಬ್ಬಾ ಎಂದರೆ  70-80 ವರ್ಷ ಹಳೆಯದಾಗಿರಬಹುದು ಎಂದು ಆಶ್ರಮದ ಸಿಬ್ಬಂದಿಯೊಬ್ಬರು ಹೇಳುತ್ತಾರೆ. ಅಯೋಧ್ಯೆಯಿಂದ ತಂದಿದ್ದು ಅಲ್ಲ ಎಂದು ತಿಳಿಸುತ್ತಾರೆ.

ಅಯೋಧ್ಯೆಯ ಅಸಲಿ ಮೂರ್ತಿಗಳು ಕಲ್ಲಿನವು. ಆದರೆ ಇವು ಲೋಹದ ಮೂರ್ತಿ.  ಹಾಗಾಗಿ ಅಯೋಧ್ಯೆಯಿಂದ ನೂರಾರು ವರ್ಷಗಳ ಹಿಂದೆ   ಸುರಕ್ಷತೆ ದೃಷ್ಟಿಯಿಂದ ಮೂರ್ತಿಗಳನ್ನು ಹರಿಹರಕ್ಕೆ ತರಲಾಯಿತು ಎಂಬ ಬಗ್ಗೆ ಯಾವುದೇ ದಾಖಲೆ-ಪುರಾವೆ ಇಲ್ಲ. 

click me!