ನೋಟು ನಿಷೇಧಕ್ಕೆ ಒಂದು ತಿಂಗಳು: ಪ್ರತಿಪಕ್ಷಗಳಿಂದ ಕರಾಳ ದಿನ ಆಚರಣೆ

By Suvarna Web DeskFirst Published Dec 8, 2016, 5:14 AM IST
Highlights

ಕೇಂದ್ರ ಸರ್ಕಾರ ನೋಟ್​​ ನಿಷೇಧ​​ ಮಾಡಿದ್ದರಿಂದಾಗಿ ಸಾಮಾನ್ಯ ಜನರು ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ಏಕಾಏಕಿ ಕ್ರಮದಿಂದಾಗಿ ಬಡಜನರ ನಿತ್ಯದ ವ್ಯವಹಾರಗಳು ನಿಂತಿವೆ ಎಂದು ಪ್ರತಿಪಕ್ಷಗಳು ಹೇಳಿವೆ.

ನವದೆಹಲಿ (ಡಿ.08): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮ ಖಂಡಿಸಿ​ ಖಂಡಿಸಿ ದೆಹಲಿಯಲ್ಲಿ ಪ್ರತಿಪಕ್ಷಗಳಿಂದ ಕರಾಳ ದಿನ ಆಚರಣೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ ನೋಟ್​​ ನಿಷೇಧ​​ ಮಾಡಿದ್ದರಿಂದಾಗಿ ಸಾಮಾನ್ಯ ಜನರು ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ಏಕಾಏಕಿ ಕ್ರಮದಿಂದಾಗಿ ಬಡಜನರ ನಿತ್ಯದ ವ್ಯವಹಾರಗಳು ನಿಂತಿವೆ ಎಂದು ಪ್ರತಿಪಕ್ಷಗಳು ಹೇಳಿವೆ.

ಚಳಿಗಾಲ ಅಧಿವೇಶನ ಆರಂಭಗೊಂಡು 17 ದಿನಗಳು ಕಳೆದರೂ ಕೂಡ ಪ್ರಧಾನಿ ಸಂಸತ್ತಿನಲ್ಲಿ ಯಾವುದೇ ಮಾತನಾಡಿಲ್ಲ. ಸರ್ಕಾರದ ಕ್ರಮದ ಕುರಿತು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಉತ್ತರಿಸಬೇಕೆಂದು ಆಗ್ರಹಿಸಿ ದೆಹಲಿಯ ಸಂಸತ್​ ಭವನ ಗಾಂಧಿ ಪ್ರತಿಮೆ ಎದುರು  ರಾಹುಲ್​ಗಾಂಧಿ ಮತ್ತು ವಿಪಕ್ಷಗಳ ಮುಖಂಡರು ಮುಖಕ್ಕೆ ಹಾಗೂ ಕೈಗಳಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

click me!