ಎಪ್ರಿಲ್ 1 ರಿಂದ ರೈಲ್ವೇ ಟಿಕೆಟ್ ರಿಯಾಯ್ತಿ ಪಡೆಯಲು ಹಿರಿಯ ನಾಗರಿಕರಿಗೆ ಆಧಾರ್ ಕಾರ್ಡ್ ಕಡ್ಡಾಯ!

By Suvarna Web DeskFirst Published Dec 8, 2016, 5:03 AM IST
Highlights

ಹಿರಿಯ ನಾಗರಿಕರು ರೈಲ್ವೇ ಟಿಕೆಟ್ ರಿಯಾಯ್ತಿ ಪಡೆಯಲು ಇಚ್ಛಿಸುತ್ತರೆಂದಾದರೆ ಅಥವಾ ಈ ಮೊದಲಿನಿಂದಲೂ ಪಡೆಯುತ್ತಿದ್ದವರೆಲ್ಲರೂ 2017ರ ಏಪ್ರಿಲ್ 1 ರಿಂದ ಈ ರಿಯಾಯ್ತಿ ಮುಂದುವರೆಸಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ರಿಯಾಯ್ತಿ ಟಿಕೆಟ್ ಪಡೆಯುವಾಗ ಆಧಾರ್ ಕಾರ್ಡ್ ತಪ್ಪದೇ ಹಾಜರುಪಡಿಸಬೇಕಾಗುತ್ತದೆ.

ನವದೆಹಲಿ(ಡಿ.08): ಹಿರಿಯ ನಾಗರಿಕರು ರೈಲ್ವೇ ಟಿಕೆಟ್ ರಿಯಾಯ್ತಿ ಪಡೆಯಲು ಇಚ್ಛಿಸುತ್ತರೆಂದಾದರೆ ಅಥವಾ ಈ ಮೊದಲಿನಿಂದಲೂ ಪಡೆಯುತ್ತಿದ್ದವರೆಲ್ಲರೂ 2017ರ ಏಪ್ರಿಲ್ 1 ರಿಂದ ಈ ರಿಯಾಯ್ತಿ ಮುಂದುವರೆಸಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ರಿಯಾಯ್ತಿ ಟಿಕೆಟ್ ಪಡೆಯುವಾಗ ಆಧಾರ್ ಕಾರ್ಡ್ ತಪ್ಪದೇ ಹಾಜರುಪಡಿಸಬೇಕಾಗುತ್ತದೆ.

ಈ ಹೊಸ ನಿಯಮ ಕೌಂಟ್ರ್'ನಲ್ಲಿ ಟಿಕೆಟ್ ಪಡೆಯುವ ಹಾಗೂ ಇ-ಟಿಕೆಟ್ ಈ ಎರಡು ವಿಧಾನಗಳಿಗೂ ಅನ್ವಯವಾಗುತ್ತದೆ. ಆದರೆ ಜನವರಿ- ಮಾರ್ಚ್ 2017ರ ವರೆಗೆ ಇದನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗಿಲ್ಲ. ಟಿಕೆಟ್'ನ ಅವ್ಯವಹಾರವನ್ನು ತಡೆಗಟ್ಟಲು ಈ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ.

ಹಿರಿಯ ನಾಗರಿಕರಿಗೆ ರಿಯಾಯ್ತಿ ಟಿಕೆಟ್ ನೀಡುವ ವ್ಯವಸ್ಥೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲು ರೈಲ್ವೇ ಇಲಾಖೆ ಯೋಜನೆ ರೂಪಿಸಿದೆ. ಇದರ ಅನ್ವಯ ಜನವರಿಯಿಂದ 1ರಿಂದ ಮಾರ್ಚ್ 31, 2017ರವರೆಗೆ ಹಿರಿಯ ನಾಗರಿಕರು ರಿಯಾಯಯ್ತಿ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಆಧಾರ್ ಕಾರ್ಡ್'ನ್ನು ಸ್ವಿಚ್ಛೆಯಿಂದ ಪ್ರಸ್ತುತಪಡಿಸಬಹುದು, ಕಡ್ಡಾಯವಲ್ಲ. ಆದರೆ 2017 ಏಪ್ರಿಲ್'ನಿಂದ ಇದು ಕಡ್ಡಾಯವಾಗಿರುತ್ತದೆ.

ಅಕ್ಟೋಬರ್'ವರೆಗೆ ದೇಶದಾದ್ಯಂತ 106.69 ಕೋಟಿ ಆಧಾರ್ ಸಂಖ್ಯೆಗಳನ್ನು ಜಾರಿಗೊಳಿಸಲಾಗಿದೆ. ಅಕ್ಟೋಬರ್'ನಲ್ಲಿ ವಿಶಿಷ್ಟ ಗುರುತುಚೀಟಿ ಪ್ರಾಧೀಕಾರ 22 ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಆಧಾರ್ ಸಂಖ್ಯೆ ಕೊಡಿಸುವ ನಿಟ್ಟಿನಲ್ಲಿ ಒಂದು ತಿಂಗಳ 'Challenge Campaigh' ಆರಂಭಿಸಿತ್ತು.

ಇ- ಟಿಕೆಟ್ ಬುಕಿಂಗ್ ಮಾಡುವಾಗ ಆಧಾರ್ ಸಂಖ್ಯೆಯನ್ನು ಹೀಗೆ ಪ್ರಸ್ತುತಪಡಿಸಿ

IRCTC ವೆಬ್'ಸೈಟ್'ಗೆ ಹೋಗಿ, ಟಿಕೆಟಿಂಗ್ ವೆಬ್'ಸೈಟ್'ನಲ್ಲಿ ನಿಮ್ಮ ಬಳಕೆದಾರರ ಸಂಖ್ಯೆ ಹಾಗೂ ಪಾಸ್'ವರ್ಡ್ ನಮೂದಿಸಿ ಲಾಗಿನ್ ಆಗಿ. ನಿಮ್ಮ ಅಕೌಂಟ್ ಇಲ್ಲದಿದ್ದರೆ ಸೈನ್ ಅಪ್ ಮಾಡಿ. ಬಳಿಕ 'ಪ್ರೊಫೈಲ್' ಆಯ್ಕೆಯನ್ನು ಕ್ಲಿಕ್ ಮಾಡಿ 'ಮಾಸ್ಟರ್ ಲಿಸ್ಟ್' ಆಯ್ಕೆಯನ್ನು ಒತ್ತಿ. ಈ ಪಟ್ಟಿಯಲ್ಲಿ ಹಿರಿಯ ನಾಗರಿಕರನ್ನು ಸೇರಿಸಿಕೊಳ್ಳಲು ಅವರ ಹೆಸರನ್ನು, ಜನ್ಮ ದಿನಾಂಕ, ಲಿಂಗ ಮೊದಲಾದ ವಿವರಗಳನ್ನು ನಮೂದಿಸಿ. ಬಳಿಕ 'ಸೀನಿಯರ್ ಸಿಟಿಜನ್'(ಹಿರಿಯ ನಾಗರಿಕ) ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ ಹಾಗೂ 'ಗುರುತು ಚೀಟಿ' ನಮೂನೆಯನ್ನು ತಿಳಿಸಿ ಆಧಾರ್ ಕಾರ್ಡ್ ನಂಬರ್ ಸೇರಿಸಿಕೊಳ್ಳಿ. ಇವೆಲ್ಲದರ ಬಳಿಕ 'ಆ್ಯಡ್ ಪ್ಯಾಸೆಂಜರ್' ಮೇಲೆ ಕ್ಲಿಕ್ ಮಾಡಿದರೆ ಹಿರಿಯ ನಾಗರಿಕರ ಆಧಾರ್ ಕಾರ್ಡ್ ಡಿಟೇಲ್ಸ್'ನ್ನು ಪ್ರಮಾಣೀಕರಿಸಬಹುದು.

  

click me!