ದುರ್ವರ್ತನೆ ಆರೋಪ : 19 ಶಾಸಕರ ಅಮಾನತು

Published : Mar 22, 2017, 01:12 AM ISTUpdated : Apr 11, 2018, 12:55 PM IST
ದುರ್ವರ್ತನೆ ಆರೋಪ : 19 ಶಾಸಕರ ಅಮಾನತು

ಸಾರಾಂಶ

19 ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಅಮಾನತು ಕ್ರಮವನ್ನು ಅಸಂವಿಧಾನ ಕ್ರಮವೆಂದು ಖಂಡಿಸಿರುವ ಶಾಸಕರು ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ್ದು, ರಾಜ್ಯಪಾಲ ಸಿ.ವಿದ್ಯಾಸಾಗರ್ ಅವರಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.

ಮುಂಬೈ(ಮಾ.22): ಬಜೆಟ್ ಮಂಡನೆ ವೇಳೆ ದುರ್ವರ್ತನೆ ತೋರಿದ ಆರೋಪದ ಮೇಲೆ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ 19 ಮಂದಿ ಶಾಸಕರನ್ನು 9 ತಿಂಗಳು ಅಮಾನತುಗೊಳಿಸಲಾಗಿದೆ.

ಆಡಳಿತರೂಢ ಭಾರತೀಯ ಜನತಾ ಪಕ್ಷವು ಆಯವ್ಯಯ ಮಂಡಿಸುತ್ತಿದ್ದ ಸಮಯದಲ್ಲಿ ಕಾಂಗ್ರೆಸ್ - ಎನ್'ಸಿಪಿ ಮೈತ್ರಿಕೂಟದ ವಿರೋಧ ಪಕ್ಷದ ಶಾಸಕರು ಬಜೆಟ್ ಮಂಡನೆಗೆ ತೊಂದರೆ ನೀಡುತ್ತಿದ್ದರು. ಗದ್ದಲ ಹೆಚ್ಚಾದ ಕಾರಣ ಅಧಿವೇಶನನ್ನು ಮುಂದೂಡಿ 19 ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಅಮಾನತು ಕ್ರಮವನ್ನು ಅಸಂವಿಧಾನ ಕ್ರಮವೆಂದು ಖಂಡಿಸಿರುವ ಶಾಸಕರು ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ್ದು, ರಾಜ್ಯಪಾಲ ಸಿ.ವಿದ್ಯಾಸಾಗರ್ ಅವರಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.

ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ್ ಸುಧೀರ್ ಮುಂಗಾಂತೀವಾರ್ ಅವರು ಈ ವರ್ಷದ ಆಯವ್ಯಯ ಮಂಡಿಸುವಾಗ ರೈತರ ಸಾಲ ಮನ್ನಾ ಮಾಡಬೇಕೆಂದು ಅಮಾನತುಗೊಂಡು ಶಾಸಕರು ಸದನದಲ್ಲಿ ಗದ್ದಲವೆಬ್ಬಿಸಿದ್ದರು. ಅಲ್ಲದೆ  ಆಯವ್ಯದ ಪ್ರತಿಗಳನ್ನು ಸದನದ ಹೊರಗಡೆ ಸುಟ್ಟು ಹಾಕಿದ್ದರು. ಈ ಹಿನ್ನಲೆಯಲ್ಲಿ ದುರ್ವರ್ತನೆ ತೋರಿದ ಆರೋಪದ ಮೇಲೆ ಡಿಸೆಂಬರ್ 31ರ ವರೆಗೂ ಅಮಾನತುಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Extreme fast-food consumer: ಸಿಕ್ಕಾಪಟ್ಟೆ ಫಾಸ್ಟ್‌ಫುಡ್‌ ತಿನ್ನುತ್ತಿದ್ದ 16ರ ಬಾಲಕಿ ಅನಾರೋಗ್ಯಕ್ಕೆ ಸಾವು
ಭಾರತದ ಪ್ರಜಾಪ್ರಭುತ್ವಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೊಡುಗೆಗಳು: ಒಂದು ಸ್ಮರಣಾರ್ಥ ಲೇಖನ