ಸಿದ್ದರಾಮಯ್ಯ ಶನಿ ಇದ್ದಂಗೆ : ನಮ್ಮ ಸರ್ಕಾರ ಬರಲಿ ನೋಡಿಕೊಳ್ತೇವೆ

Published : Mar 21, 2017, 06:23 PM ISTUpdated : Apr 11, 2018, 12:41 PM IST
ಸಿದ್ದರಾಮಯ್ಯ ಶನಿ ಇದ್ದಂಗೆ : ನಮ್ಮ ಸರ್ಕಾರ ಬರಲಿ ನೋಡಿಕೊಳ್ತೇವೆ

ಸಾರಾಂಶ

ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಃ ಕಾರಣ ಸುಳ್ಳು ಮೊಕದ್ದಮೆ ಹಾಕಿಸುತ್ತೀಯಲ್ಲ  ನಿನಗೆ ನಾಚಿಕೆ ಆಗಬೇಕು.

ಚಾಮರಾಜನಗರ(ಮಾ.21):ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರಾಜ್ಯಕ್ಕೆ ಶನಿ ಇದ್ದಂಗೆ. ಮೊದಲು ಅಧಿಕಾರದಿಂದ ತೊಲಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ  ತೆರಕಣಾಂಬಿಯಲ್ಲಿ ಇಂದು ನಡೆದ  ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಎಸ್ ವೈ  ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಃ ಕಾರಣ ಸುಳ್ಳು ಮೊಕದ್ದಮೆ ಹಾಕಿಸುತ್ತೀಯಲ್ಲ  ನಿನಗೆ ನಾಚಿಕೆ ಆಗಬೇಕು. ಇನ್ನು ಏಳು-ಎಂಟು ತಿಂಗಳಿನಲ್ಲಿ ನಿಮ್ಮ ತುಘಲಕ್ ದರ್ಬಾರ್ ಕೊನೆಯಾಗಲಿದೆ. ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಮುಂದೆ ನಾವೇ ಅಧಿಕಾರಕ್ಕೆ ಬರುವುದು ಖಚಿತ, ಆಗ ನಮಗೆ ನೀವೇ ಸಲ್ಯೂಟ್ ಹೊಡೆಯಬೇಕಾಗುತ್ತೆ. ನಿಮಗೆ ಪಾಠ ಕಲಿಸಬೇಕಾಗುತ್ತದೆ ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರಪ್ಪನ್‌ಗಿಂತ, ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಜಾಸ್ತಿ.! ಅಂಕಿ-ಅಂಶ ಬಚ್ಚಿಟ್ಟ ಆರ್. ಅಶೋಕ್
ಲಕ್ಸುರಿ ಕಾರು, 1 ಕೇಜಿ ಚಿನ್ನ 100 ಕೋಟಿ ಆಸ್ತಿ: ಟ್ರಾನ್ಸ್‌ಪೋರ್ಟ್ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಎಸಿಬಿ