ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿಯಿಂದ ಗಾಳ : ಕಾಂಗ್ರೆಸ್’ಗೆ ಆಪರೇಷನ್ ಕಮಲ ಭೀತಿ

By Suvarna Web DeskFirst Published Mar 2, 2018, 11:39 AM IST
Highlights

ಮೂರು ಬಾರಿ ಶಾಸಕರಾಗಿರುವ ‘ಹುಮ್ನಾಬಾದ್ ಗೌಡ’ ಎಂದೇ ಕರೆಸಿಕೊಳ್ಳುವ ರಾಜಶೇಖರ ಪಾಟೀಲ್ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಅದೃಷ್ಟ ಪರೀಕ್ಷೆ ಇಳಿಯುವ ಸಂಭವವಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ರಾಜಶೇಖರ ಪಾಟೀಲ್ ಅವರಿಗೆ ಬಿಜೆಪಿ ಗಾಳ ಹಾಕಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು : ಮೂರು ಬಾರಿ ಶಾಸಕರಾಗಿರುವ ‘ಹುಮ್ನಾಬಾದ್ ಗೌಡ’ ಎಂದೇ ಕರೆಸಿಕೊಳ್ಳುವ ರಾಜಶೇಖರ ಪಾಟೀಲ್ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಅದೃಷ್ಟ ಪರೀಕ್ಷೆ ಇಳಿಯುವ ಸಂಭವವಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ರಾಜಶೇಖರ ಪಾಟೀಲ್ ಅವರಿಗೆ ಬಿಜೆಪಿ ಗಾಳ ಹಾಕಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಿಂದ ಸುಭಾಷ್ ಕಲ್ಲೂರ್, ಪಕ್ಷದ ಉಪಾಧ್ಯಕ್ಷ ಶಿವಾನಂದ ಮಂಠಾಳಕರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಾಜಶೇಖರ ಪಾಟೀಲ್ ಪಕ್ಷಾಂತರ ಗೊಂಡರೆ ಬಿಜೆಪಿ ಬಲ ವೃದ್ಧಿಯಾಗಲಿದ್ದು, ಕಣ ಚಿತ್ರಣ ಬದಲಾಗಲಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದಿತ್ತು.

ಜೆಡಿಎಸ್ ಮಾಜಿ ಅಧ್ಯಕ್ಷ ದಿವಂಗತ ಮೆರಾಜುದ್ದೀನ್ ಪಟೇಲ್ ಸೋದರ ನಸೀಮೊದ್ದೀನ್ ಪಟೇಲ್ ಅವರು ಆ ಪಕ್ಷದಿಂದ ಈ ಬಾರಿಯೂ ಸ್ಪರ್ಧೆಗಿಳಿಯುತ್ತಿದ್ದಾರೆ.

2013ರಲ್ಲಿ ಮೂರನೇ ಸ್ಥಾನ ಗಳಿಸಿದ್ದ ಬಿಎಸ್‌ಪಿ ಜತೆಗಿನ ಮೈತ್ರಿಯಿಂದ ಪಟೇಲ್ ಅವರಿಗೆ ಮತ್ತಷ್ಟು ಮತಗಳು ಒಲಿಯುವ ಸಾಧ್ಯತೆ ಇದೆ. ಇದರಿಂದ ಮತ ವಿಭಜನೆಯಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಕ್ಷಕ್ಕೆ ಆತಂಕಕಾರಿ. ಹುಮನಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಈ ಬಾರಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ.

click me!