P Chidambaram : ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ!

Suvarna News   | Asianet News
Published : Dec 26, 2021, 05:37 PM IST
P Chidambaram : ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ!

ಸಾರಾಂಶ

ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿಕೆ ಟಿಎಂಸಿ ಹಾಗೂ ಆಪ್ ತಂತ್ರಕ್ಕೆ ವಾಗ್ದಾಳಿ ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿರುವ ಚಿದಂಬರಂ

ಪಣಜಿ (ಡಿ.26): ಮುಂಬರುವ ಗೋವಾ ವಿಧಾನಸಭೆ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ (Arvind Kejriwal) ತಂತ್ರಗಾರಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ (Congress ) ಹಿರಿಯ ನಾಯಕ ಪಿ. ಚಿದಂಬರಂ (P Chidambaram), ಈ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ (BJP) ಪಕ್ಷವನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ ಎಂದಿದ್ದಾರೆ. ಆಪ್ ಹಾಗೂ ಟಿಎಂಸಿ ಪಕ್ಷಗಳು ಗೋವಾದಲ್ಲಿ ಬಿಜೆಪಿಯೇತರ ಮತಗಳನ್ನು ಒಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ.

ಮುಂಬರುವ ಗೋವಾ ವಿಧಾನಸಭೆ (Goa Assembly polls)ಚುನಾವಣೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿರುವ ಪಿ.ಚಿದಂಬರಂ ಭಾನುವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಪ್ (AAP)ಹಾಗೂ ಟಿಎಂಸಿ (TMC) ಪಕ್ಷದ ತಂತ್ರಗಾರಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ರಾಜ್ಯದಲ್ಲಿ  ಬಿಜೆಪಿ ಪಕ್ಷವನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ. ಅದು ಸಾಕಷ್ಟು ಬಾರಿ ಸಾಬೀತು ಕೂಡ ಆಗಿದೆ. ಆದರೆ, ಈ ಬಾರಿ ಆಪ್ ಹಾಗೂ ಟಿಎಂಸಿ ಕಣಕ್ಕಿಳಿದಿರುವುದರಿಂದ ಬಿಜೆಪಿಯೇತರ ಮತಗಳೇ ಛಿದ್ರವಾಗಲಿದೆ ಎಂದು ಹೇಳಿದ್ದಾರೆ. "ಗೋವಾದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್.  ಹಣಬಲ ಹಹಾಗೂ ಅಧಿಕಾರದ ದುರುಪಯೋಗ ಮಾಡಿಕೊಂಡ ಹೊರತಾಗಿಯೂ ಬಿಜೆಪಿಯನ್ನು ಈ ರಾಜ್ಯದಲ್ಲಿ ಸೋಲಿಸುವ ಶಕ್ತಿ ಕಾಂಗ್ರೆಸ್ ಗೆ ಮಾತ್ರ ಇದೆ ಎನ್ನುವುದು ಇಲ್ಲಿನ ಜನರಿಗೂ ತಿಳಿದಿದೆ ಎಂದು ಚಿದಂಬರಂ ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ ಟಿಎಂಸಿಗೆ ಸೇರುತ್ತಿರುವ ಬಗ್ಗೆ ಮಾತನಾಡಿದ ಚಿದಂಬರಂ, ಯಾವುದೇ ಪಕ್ಷದ ಉದ್ದೇಶದ ಕುರಿತಾಗಿ ನಾನಿಲ್ಲಿ ಮಾತನಾಡಲು ಬಂದಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ಇಬ್ಬರು ಕಾಂಗ್ರೆಸ್ ಶಾಸಕದು ಮಾತ್ರವೇ ರಾಜೀನಾಮೆ ನೀಡಿ ಟಿಎಂಸಿ ಪಕ್ಷ ಸೇರಿದ್ದಾರೆ ಎಂದರು. "ಶೇ.99ರಷ್ಟು ಕಾರ್ಯಕರ್ತರು ಇಂದಿಗೂ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ರೆಗಿನಾಲ್ಡೋ ಲಾರೆನ್ಸೋ (Aleixo Reginaldo Lourenco) ನಮ್ಮ ಪಕ್ಷವನ್ನು ತೊರೆದು ಟಿಎಂಸಿ ಸೇರಿದ್ದಕ್ಕೆ ಬೇಸರವಾಗಿಲ್ಲ. ನಮ್ಮಲ್ಲಿದ್ದ ಸೋಲುವ ಅಭ್ಯರ್ಥಿಯನ್ನು ಅವರು ತೆಗೆದುಕೊಂಡಿದ್ದಾರೆ. ಟಿಎಂಸಿಯಿಂದ ಕಣಕ್ಕಿಳಿದರೂ ಅವರು ಸೋಲು ಕಾಣುವುದು ಖಂಡಿತ' ಎಂದು ಹೇಳಿದದಾರೆ.

BJP Hits Back : ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಚಿದಂಬರಂ ಗೆದ್ದಿಲ್ಲ!
ಇದೇ ವೇಳೆ ರಾಜ್ಯದಲ್ಲಿ ಚುನಾವಣೆಗೆ ಕಾಂಗ್ರೆಸ್ ಪಕ್ಷ ಯಾವ ರೀತಿಯಲ್ಲಿ ತಯಾರಿ ನಡೆಸುತ್ತಿದೆ ಎನ್ನುವ ಬಗ್ಗೆ ಮಾತನಾಡಿದ ಅವರು, ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮತದಾರನ ನಿಷ್ಠೆ ಯಾವ ಅಭ್ಯರ್ಥಿಯ ಪರವಾಗಿದೆ ಎನ್ನುವುದೇ ಮೊದಲ ಮಾನದಂಡ. ಅಯ್ಕೆಯಾದಾಗ ಅವರು ಪಕ್ಷಕ್ಕೆ ಹಾಗೂ ಮತದಾರರಿಗೆ ಎಷ್ಟು ನಿಷ್ಟರಾಗಿರುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ ಎಂದು ವಿವರಣೆ ನೀಡಿದರು. ಇನ್ನೊಂದೆಡೆ ಗೋವಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಕಳೆದ ಶುಕ್ರವಾರ ಮಾಜಿ ಶಾಸಕ ಲಾವೂ ಮಾಮ್ಲೆದಾರ್ ಸೇರಿದಂತೆ ಐವರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

TMC Pre Poll Promise: ಗೋವಾಗೆ ದೇವರು ಒಳ್ಳೆಯದು ಮಾಡಲಿ! ಟಿಎಂಸಿ ನೇರ ನಗದು ಯೋಜನೆಗೆ ಚಿದಂಬರಂ ಟ್ವೀಟ್ ಗುದ್ದು
ಫೆಬ್ರವರಿಯಲ್ಲಿ ನಡೆಯಲಿದೆ ಚುನಾವಣೆ: 40 ಶಾಸಕ ಬಲದ ಗೋವಾ ವಿಧಾನಸಭೆಗೆ ಮುಂದಿನ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ದಿನಾಂಕವನ್ನು ಇನ್ನಷ್ಟೇ ಪ್ರಕಟ ಮಾಡಬೇಕಿದೆ. 2022ರ ಮಾರ್ಚ್ 15 ರಂದು ಹಾಲಿ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಪಕ್ಷವೇ ಗೋವಾದಲ್ಲಿ ಪ್ರಧಾನ ಎದುರಾಳಿಯಾಗಿದ್ದರೂ, ಬಹು-ಕೋನದಲ್ಲಿ ಚುನಾವಣೆ ಎದುರಿಸಬೇಕಿರುವ ಕಾರಣ ಮಿತ್ರ ಪಕ್ಷಗಳ ಸಹಾಯ ಇಲ್ಲಿ ಅನಿವಾರ್ಯವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್