30 ಜಿಲ್ಲೆಗಳಲ್ಲಿ ಕೇವಲ 13 ಜಿಲ್ಲೆಗಳಿಗೆ ಮಾತ್ರ ಯಡಿಯೂರಪ್ಪ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಇನ್ನುಳಿದ 17 ಜಿಲ್ಲೆಗಳಿಗೆ ಮಂತ್ರಿಭಾಗ್ಯ ಸಿಕ್ಕಿಲ್ಲ. ಹಾಗಾದ್ರೆ ಯಾವ ಜಿಲ್ಲೆಗುಂಟು, ಯಾವ ಜಿಲ್ಲೆಗಿಲ್ಲ ಮಂತ್ರಿ ಭಾಗ್ಯ? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಆ.20): ಕೊನೆಗೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟ ರಚನೆಯಾಗಿದೆ. ಇಂದು (ಮಂಗಳವಾರ) ರಾಜಭವನದ ಗಾಜಿನ ಮನೆಯಲ್ಲಿ 17 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಳೆದು ತೂಗಿ ಸಚಿವರ ಹೆಸರುಗಳನ್ನು ಫೈನಲ್ ಮಾಡಿ ಕಳುಹಿಸಿದ್ದಾರೆ. ಆದ್ರೆ ಶಾ ಅವರು ಯಾವ ಆಧಾರ ಮೇಲೆ ಮಂತ್ರಿ ಭ್ಯಾಗ್ಯ ನೀಡಿದ್ದಾರೆ ಎನ್ನುವುದು ಮಾತ್ರ ಯಾರಿಗೂ ತಿಳಿಯದಂತಾಗಿದೆ.
ಯಡಿಯೂರಪ್ಪ ಕ್ಯಾಬಿನೆಟ್ ರೆಡಿ: ಇಲ್ಲಿದೆ ನೂತನ ಸಚಿವರ ಸಂಭಾವ್ಯ ಖಾತೆ
ಜಿಲ್ಲೆವಾರು ಮತ್ತು ಜಾತಿವಾರು ಆಧಾರ ಮೇಲೆ ಸಚಿವ ಸ್ಥಾನ ನೀಡರಲಿಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ 30 ಜಿಲ್ಲೆಗಳಲ್ಲಿ ಕೇವಲ 13 ಜಿಲ್ಲೆಗಳಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ. ಇನ್ನುಳಿದ 17 ಜಿಲ್ಲೆಗಳಿಗೆ ಮಂತ್ರಿಭಾಗ್ಯ ಸಿಕ್ಕಿಲ್ಲ. ಯಾವ ಜಿಲ್ಲೆಗುಂಟು, ಯಾವ ಜಿಲ್ಲೆಗಿಲ್ಲ ಮಂತ್ರಿ ಭಾಗ್ಯ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ದಕ್ಷಿಣ ಕನ್ನಡಕ್ಕಿಲ್ಲ ಮಂತ್ರಿಗಿರಿ ಪಟ್ಟ
ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಬರೊಬ್ಬರಿ 7 ಶಾಸಕರನ್ನು ಕೊಟ್ಟರು ಜಿಲ್ಲೆಗೆ ಒಂದೇ ಒಂದು ಮಂತ್ರಿ ಭಾಗ್ಯ ಸಿಕ್ಕಿಲ್ಲ. ಕೊನೆ ಕ್ಷದಣದವರೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರ ಹೆಸರು ಕಾಣಿಸಿಕೊಂಡಿತ್ತು. ಆದರೆ, ಕೊನೆ ಕ್ಷಣದಲ್ಲಿ ಅಂಗಾರ ಅವರಿಗೆ ಮಂತ್ರಿ ಪಟ್ಟ ಕೈತಪ್ಪಿದೆ.
ರಾಜಭವನದಲ್ಲಿ ಪ್ರಮಾಣ ವಚನ: ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ಸಚಿವರಿವರು!
ಹೈದರಾಬಾದ್ ಕರ್ನಾಟಕಕ್ಕೆ ಒಂದೇ ಸ್ಥಾನ
ಬೀದರ್- ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಒಟ್ಟು 6 ಜಿಲ್ಲೆಗಳನ್ನೊಳಗೊಳಡಿರುವ ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿದೆ. ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಪ್ರಭು ಚೌವ್ಹಾಣ್ ಅವರಿಗೆ ಬಿಟ್ಟರೇ ಇನ್ನುಳಿದ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಸಚಿವ ಸ್ಥಾನ ದೊರೆತ್ತಿಲ್ಲ.
ಮಂತ್ರಿ ಭಾಗ್ಯದಿಂದ ವಂಚಿತ ಜಿಲ್ಲೆಗಳು
ಕಲಬುರಗಿ , ಯಾದಗಿರ, ರಾಯಚೂರು ,ಕೊಪ್ಪಳ , ಬಳ್ಳಾರಿ, ಮೈಸೂರು ,ಮಂಡ್ಯ ,ರಾಮನಗರ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮಾಂತರ , ಚಿಕ್ಕಬಳ್ಳಾಪುರ , ದಾವಣಗೆರೆ , ಉತ್ತರ ಕನ್ನಡ , ಕೊಡಗು , ಚಾಮರಾಜನಗರ, ದಕ್ಷಿಣ ಕನ್ನಡ
ಬೆಂಗಳೂರು ನಗರಕ್ಕೆ ಸಿಂಹಪಾಲು
11 ಬಿಜೆಪಿ ಶಾಸಕರ ಪೈಕಿ ನಾಲ್ವರಿಗೆ ಸಚಿವ ಸ್ಥಾನ ಸಿಕ್ಕಿದೆ. ಮಲ್ಲೇಶ್ವರಂ-ಅಶ್ವಥ್ ನಾರಾಯಣ, ರಾಜಾಜೀನಗರ-ಸುರೇಶ್ ಕುಮಾರ್, ಗೋವಿಂದರಾಜನಗರ-ಸೋಮಣ್ಣ, ಪದ್ಮನಾಭನಗರ-ಆರ್. ಅಶೋಕ್.
ಮಂತ್ರಿ ಪಟ್ಟ ಸಿಕ್ಕ ಜಿಲ್ಲೆಗಳು
ಬೆಳಗಾವಿ- 2 ಸಚಿವ ಸ್ಥಾನ (ಲಕ್ಷ್ಮಣ್ ಸವದಿ, ಶಶಿಕಲಾ ಜೊಲ್ಲೆ).
ಧಾರವಾಡ-1 (ಜಗದೀಶ್ ಶೆಟ್ಟರ್
ಬೆಂಗಳೂರು-4 (ಅಶ್ವಥ್ ನಾರಾಯಣ, ಸುರೇಶ್ ಕುಮಾರ್, ಅಶೋಕ್, ಸೋಮಣ್ಣ)
ಹಾವೇರಿ-1 (ಬಸವರಾಜ ಬೊಮ್ಮಾಯಿ)
ತುಮಕೂರು-1 (ಮಾಧುಸ್ವಾಮಿ)
ಬಾಗಲಕೋಟೆ-1 (ಗೋವಿಂದ್ ಕಾರಜೋಳ)
ಬೀದರ್-1( ಪ್ರಭು ಚೌವ್ಹಾಣ್)
ಕೋಲಾರ್-1 (ಎಚ್. ನಾಗೇಶ್)
ಚಿಕ್ಕಮಗಳೂರು-1(ಸಿ.ಟಿ.ರವಿ)
ಶಿವಮೊಗ್ಗ-2 (ಈಶ್ವರಪ್ಪ, ಯಡಿಯೂರಪ್ಪ)
ಚಿತ್ರದುರ್ಗ-1 (ಶ್ರೀರಾಮುಲು)
ಉಡುಪಿ-1 (ಕೋಟಾ ಶ್ರೀನಿವಾಸ ಪೂಜಾರಿ)
ಗದಗ-1- (ಸಿ.ಸಿ.ಪಾಟೀಲ್)