ಮೂರೊತ್ತು ಲಡ್ಡು ತಿನ್ನಿಸೋ ಹೆಂಡ್ತಿ: ಪತಿ ಕೇಳಿದ ಯಾವಾಗ ಡಿವೋರ್ಸ್ ಕೊಡ್ತಿ?

Published : Aug 20, 2019, 05:04 PM IST
ಮೂರೊತ್ತು ಲಡ್ಡು ತಿನ್ನಿಸೋ ಹೆಂಡ್ತಿ: ಪತಿ ಕೇಳಿದ ಯಾವಾಗ ಡಿವೋರ್ಸ್ ಕೊಡ್ತಿ?

ಸಾರಾಂಶ

ಪತಿಗೆ ತಿನ್ನಲೂ ಲಡ್ಡೂ ಬಿಟ್ಟು ಬೇರೆ ಏನನ್ನೂ ನೀಡದ ಪತ್ನಿ| ಊಟ ನೀಡದೇ ಕೇವಲ ಲಡ್ಡೂ ಕೊಡುವ ಪತ್ನಿಯಿಂದ ಬೇಸತ್ತ ಪತಿರಾಯ| ಲಡ್ಡೂ ಕೊಡುವ ಪತ್ನಿಯಿಂದ ವಿಚ್ಚೇದನ ಬಯಸಿದ ಗಂಡ| ಉತ್ತರಪ್ರದೇಶದ ಮೀರಠ್’ನಲ್ಲಿ ನಡೆಯಿತು ವಿಚಿತ್ರ ಘಟನೆ| ಮಂತ್ರವಾದಿಯ ಮಾತು ಕೇಳಿ ಪತಿಗೆ ಊಟ ಹಾಕದ ಪತ್ನಿ| ಕೌಟುಂಬಿಕ ನ್ಯಾಯಾಲಯದ ಕೌನ್ಸೆಲಿಂಗ್’ಗೂ ಬಗ್ಗದ ಪತ್ನಿ|

ಮೀರಠ್(ಆ.20): ಗಂಡ ಚೆನ್ನಾಗಿ ತಿಂದುಂಡು ದಷ್ಟಪುಷ್ಟವಾಗಿರಲಿ ಎಂಬುದು ಎಲ್ಲಾ ಭಾರತೀಯ ನಾರಿಯರ ಬಯಕೆ. ಪತಿರಾಯ ಚೆನ್ನಾಗಿ ತಿಂದಷ್ಟೂ ಸಂಸಾರ ನೌಕೆ ಚೆನ್ನಾಗಿ ತೇಲುತ್ತದೆ ಎಂಬುದು ಪತ್ನಿ ಚೆನ್ನಾಗಿ ಬಲ್ಲಳು.

ಆದರೆ ಇಲ್ಲೋರ್ವ ಪತ್ನಿ ಮಂತ್ರವಾದಿ ಮಾತು ಕೇಳಿ ಪತಿಗೆ ತಿನ್ನಲು ದಿನವೂ ಕೇವಲ ಲಡ್ಡೂ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾಳೆ.  

ಪತ್ನಿ ಕೇವಲ ತಿನ್ನಲು ಲಡ್ಡೂ ಕೊಡುತ್ತಾಳೆಂದು ಆರೋಪಿಸಿ, ಆಕೆಯಿಂದ ವಿಚ್ಚೇದನ ಕೋರಿ ಪತಿರಾಯ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.

ಉತ್ತರಪ್ರದೇಶದ ಮೀರಠ್’ನಲ್ಲಿ ಈ ಘಟನೆ ನಡೆದಿದ್ದು, ಪರಿಯ ಆರೋಗ್ಯ ಸುಧಾರಣೆಗಾಗಿ ಲಡ್ಡೂ ಬಿಟ್ಟು ಬೇರೆ ಏನನ್ನೂ ಕೊಡಕೂಡದು ಎಂಬ ಮಂತ್ರವಾದಿಯ ಮಾತು ಇದೀಗ ವಿಚ್ಚೇದನಕ್ಕೆ ಕಾರಣವಾಗಿದೆ.

ಪತಿಯ ದೂರು ಸ್ವೀಕರಿಸಿ ಕೌನ್ಸೆಲಿಂಗ್ ನಡೆಸಲು ಕೌಟುಂಬಿಕ ನ್ಯಾಯಾಲಯ ಪ್ರಯತ್ನ ನಡೆಸಿತಾದರೂ, ಮೂಢನಂಬಿಕೆ ಮೇಲೆ ವಿಶ್ವಾಸವಿರಿಸಿರುವ ಪತ್ನಿ ನ್ಯಾಯಾಲಯದ ಮಾತು ಕೇಳುತ್ತಿಲ್ಲ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: IPL 2026 - ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
Karnataka News Live: ಮುಳ್ಳಯ್ಯನಗಿರಿಯಲ್ಲಿ ಸೃಷ್ಟಿಯಾಯ್ತು ‘ಮಿನಿ ಹಿಮಾಲಯ’ - ಮುಂಗಾರಿಗೂ ಮುನ್ನವೇ ಮಂಜಿನ ನಗರಿಯಾದ ಕಾಫಿನಾಡು!