
ಮೈಸೂರು(ನ.11): ಮದುವೆ ಕಟ್ಟಕಡೆಯ ಕ್ಷಣದಲ್ಲಿ ಕ್ಯಾನ್ಸಲ್ ಆಗಿತ್ತು. ತಾಳಿ ಕಟ್ಟಬೇಕಿದ್ದ ಹುಡುಗ ಓಡಿಹೋಗಿದ್ದ. ಆ ಸಮಯದಲ್ಲಿ, ಒಬ್ಬ ವಧುವಿಗೆ ನಾಲ್ಕು ವರರು ತಾಳಿ ಕಟ್ಟೋದಕ್ಕೆ ಮುಂದಾದರು. ಈ ಘಟನೆ ನಡೆದಿರೋದು ಮೈಸೂರಿನಲ್ಲಿ.
ಈಶ್ವರಾಚಾರ್ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರಿ ಮಾನಸಾಗೆ ಹುಣಸೂರಿನ ಎಂ.ಟೆಕ್ ಪದವೀಧರ ಪ್ರದೀಪ್ ನಡುವೆ ಮದುವೆ ನಿಶ್ಚಯವಾಗಿತ್ತು. ಆದ್ರೆ ವರ ಪ್ರದೀಪ್ ನನಗೆ ಮದುವೆ ಇಷ್ಟವಿಲ್ಲ ಎಂದು ಲೆಟರ್ ಬರೆದಿಟ್ಟು ಛತ್ರಕ್ಕೂ ಬರದೇ ಎಸ್ಕೇಪ್ ಆಗಿದ್ದ.
ಮದುವೆ ನಿಂತುಹೋಗಬಾರದು, ನಿಗದಿಯಾಗಿದ್ದ ಲಗ್ನದಲ್ಲೇ ಮದುವೆ ಮಾಡಬೇಕು ಅಂಥಾ ಯುವತಿಯ ಪೋಷಕರು ವರನ ಹುಡುಕಾಟ ನಡೆಸಿದ್ರು. ವರನನ್ನು ಹುಡುಕೋ ಧಾವಂತದಲ್ಲಿ ಮಾನಸ ತಂದೆ-ತಾಯಿ ಎಡವಟ್ಟು ಮಾಡಿಕೊಂಡ್ರು. ಆ ಎಡವಟ್ಟಿನ ಪರಿಣಾಮ ನಾಲ್ವರು ವರರು ರೆಡಿಯಾದರು.
ಮಾನಸಾ ತಂದೆ ಕಡೆಯಿಂದ ಹಾರೋಹಳ್ಳಿಯ ಕಾಂತರಾಜ್ ವರನಾಗಿ ಬಂದ. ಮಾನಸಾ ತಾಯಿ ಕಡೆಯಿಂದ ಕುವೆಂಪುನಗರದ ಹೊನ್ನಪ್ಪಚಾರ್ ವರನಾಗಿ ಬಂದ. ಸಂಬಂಧಿಕರಾದ ರಾಧ ದಂಪತಿ ಪುತ್ರ ಅಭಿಲಾಶ್ ಕೂಡಾ ಮದುವೆಯಾಗೋಕೆ ಎಂಟ್ರಿ ಕೊಟ್ಟ. ಇನ್ನೊಬ್ಬ ವರ ರಮೇಶ್ ಅವರನ್ನ ಕೂಡಾ ಮಾನಸಾ ತಂದೆ ರೆಡಿ ಮಾಡಿಟ್ಟಿದ್ರು.
ಈಗ ಮಾನಸಾ ಯಾರನ್ನ ಮದುವೆಯಾಗಬೇಕು ಅನ್ನೋ ವಿಚಾರದಲ್ಲಿ ಗಲಾಟೆಯೇ ನಡೀತು. ಛತ್ರದಲ್ಲೇ ತಾಯಿ-ತಂದೆ ಜಗಳ ಮಾಡಿಕೊಂಡ್ರು. ಕೊನೆಗೆ ಹಿರಿಯರೆಲ್ಲ ಸೇರಿ ವರನ ಆಯ್ಕೆಯನ್ನ ವಧುವೇ ಮಾಡಲಿ ಅನ್ನೋ ತೀರ್ಮಾನಕ್ಕೆ ಬಂದ್ರು. ಕೊನೆಗೆ ಅಭಿಲಾಶ್ನ ಕೈ ಹಿಡಿಯಲು ಮಾನಸ ಒಪ್ಪಿಕೊಂಡ್ರು. ಇದೆಲ್ಲಾ ರಾದ್ಧಾಂತ ಮುಗಿದ ಬಳಿಕ ಅಭಿಲಾಶ್ ಹಾಗೂ ಮಾನಸ ಮದುವೆ ಸುಸೂತ್ರವಾಗಿ ನೆರವೇರಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.