
ಬೆಂಗಳೂರು(ನ.11): ಮಾಸ್ತಿಗುಡಿ ದುರಂತಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಉದಯ್ ಮತ್ತು ಅನಿಲ್ ದುರ್ಮರಣಕ್ಕೆ ಮಾಸ್ತಿಯಮ್ಮನ ಶಾಪವೇ ಕಾರಣ ಎನ್ನಲಾಗುತ್ತಿದೆ. ಮಾಸ್ತಿಗುಡಿ ಚಿತ್ರ ತಂಡದಲ್ಲೇ ಇಂಥದ್ದೊಂದು ಭೀತಿಯ ಮಾತು ಕೇಳಿಬರುತ್ತಿದೆ. ತಾಯಿಯ ಕೆಂಡದಂತ ಕೋಪಕ್ಕೆ ಈ ಇಬ್ಬರೂ ಕಲಾವಿದರು ಬಲಿಯಾದರಾ ಅನ್ನೋದು ಅವರ ಅನುಮಾನ.
ಏಕೆಂದರೆ, ಚಿತ್ರದ ಹೆಸರು ಮಾಸ್ತಿಗುಡಿಯಾದರೂ, ಮಾಸ್ತಿಯಮ್ಮನ ದೇವಸ್ಥಾನದಲ್ಲಿ ಯಾವುದೇ ಶೂಟಿಂಗ್ ಆಗಿಲ್ಲ. ಮಾಸ್ತಮ್ಮ ದೇವಿ ಚಿತ್ರೀಕರಣಕ್ಕೆ ನಿರಾಕರಣೆ ಅನುಮತಿ ಸಿಕ್ಕಿರಲಿಲ್ಲ. ಅಕ್ಟೋಬರ್ನಲ್ಲಿ ಮಾಸ್ತಿಯಮ್ಮನ ದೇವಸ್ಥಾನಕ್ಕೆ ಪೂಜೆಯ ಚಿತ್ರೀಕರಣಕ್ಕೆ ಹೋಗಿದ್ದ ತಂಡ, ದಾಂಡೇಲಿ ಅಭಯಾರಣ್ಯದಲ್ಲಿ ಚಿತ್ರೀಕರಣ ಮುಗಿಸಿ ಬಂದಿತ್ತು. ದೇವಿಗೆ ಚಿತ್ರದ ಆರಂಭದಲ್ಲಿಯೇ ಪೂಜೆ ಸಲ್ಲಿಸಿರಲಿಲ್ಲ. ಇದಕ್ಕಾಗಿಯೇ ಚಿತ್ರತಂಡದ ಮೇಲೆ ಅಡವಿ ದೇವಿ ಮುನಿಸಿಕೊಂಡಿದ್ದಾಳೆ ಅನ್ನೋ ಭಯ ಕಾಡುತ್ತಿದೆ.
ಹೆಚ್ ಡಿ ಕೋಟೆ ಬಳ್ಳೆ ಶಿಬಿರದಲ್ಲಿರುವ ಮಾಸ್ತಮ್ಮ ದೇವಸ್ಥಾನದ ದೇವಿಯ ಶಾಪ, ಈಗ ಮಾಸ್ತಿಗುಡಿ ಚಿತ್ರತಂಡವನ್ನು ಕಾಡುತ್ತಿದೆ. ಮಾಸ್ತಿಯಮ್ಮನಿಗೆ ಪೂಜೆ ಸಲ್ಲಿಸಿದ್ದರೆ, ಇಂಥಾದ್ದೊಂದು ಅನಾಹುತ ಆಗುತ್ತಿರಲಿಲ್ಲ. ಏಕೆಂದರೆ, ಈ ಹಿಂದೆ ಗಂಧದ ಗುಡಿ ಚಿತ್ರದಲ್ಲೂ ಇಂಥದ್ದೇ ಅನಾಹುತವಾಗಿತ್ತು.
ಆ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿತ್ತು. ಗಂಧದಗುಡಿ ಶೂಟಿಂಗ್ ವೇಳೆ, ವಿಷ್ಣುವರ್ಧನ್ ಕೈಲಿದ್ದ ಬಂದೂಕಿನಲ್ಲಿ ಅಚಾತುರ್ಯದಿಂದ ವೊರಿಜಿನಲ್ ಬುಲೆಟ್ ತುಂಬಲಾಗಿತ್ತು. ಅದು ಆಕಸ್ಮಿಕವಾಗಿ ಸಿಡಿದು, ರಾಜ್ ಕುಮಾರ್ ಗುಂಡಿಗೆ ಬಲಿಯಾಗಬೇಕಿತ್ತು. ಆದರೆ, ಮಾಸ್ತಿಯಮ್ಮನ ಕೃಪೆಯಿಂದಾಗಿಯೇ ರಾಜ್ ಅಂದು ಪ್ರಾಣಾಪಾಯದಿಂದ ಪಾರಾಗಿದ್ದರು.
ಗಂಧದ ಗುಡಿ ಚಿತ್ರ ಶುರುವಾಗುವ ಮುನ್ನ ಮಾಸ್ತಿಯಮ್ಮನಿಗೆ ರಾಜ್ ಕುಮಾರ್ ಪೂಜೆ ಸಲ್ಲಿಸಿದ್ದರು. ಆದರೆ, ಆ ಕೆಲಸವನ್ನು ಮಾಸ್ತಿಗುಡಿ ಚಿತ್ರತಂಡ ಮಾಡಿರಲಿಲ್ಲ. ಅಷ್ಟೇ ಅಲ್ಲ, ಗಂಧದ ಗುಡಿ ಪಾರ್ಟ್ 2 ನಲ್ಲಿ ಕೂಡಾ ಶಿವರಾಜ್ ಕುಮಾರ್, ಮಾಸ್ತಿಯಮ್ಮನಿಗೆ ಪೂಜೆ ಸಲ್ಲಿಸಿಯೇ ಚಿತ್ರದ ಶೂಟಿಂಗ್ ಶುರು ಮಾಡಿದ್ದರು. ಯಾವುದೇ ಅನಾಹುತವಾಗಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.