ಜಗತ್ತಿಗೆ ಮಾದರಿಯಾದ ಎರಡು ಗ್ರಾಮಗಳು, ಕರ್ನಾಟಕ- ಕೇರಳ ಭಾಯ್ ಭಾಯ್!: ಆಗಿದ್ದೇನು?

Published : Sep 28, 2017, 01:35 PM ISTUpdated : Apr 11, 2018, 12:49 PM IST
ಜಗತ್ತಿಗೆ ಮಾದರಿಯಾದ ಎರಡು ಗ್ರಾಮಗಳು, ಕರ್ನಾಟಕ- ಕೇರಳ ಭಾಯ್ ಭಾಯ್!: ಆಗಿದ್ದೇನು?

ಸಾರಾಂಶ

ನೀರಿಗಾಗಿ ನಿತ್ಯ ಜಗಳವಾಡುವ ದೇಶ, ರಾಜ್ಯ, ಜನರ ಮಧ್ಯೆ ಇಲ್ಲೆರಡು ಅಕ್ಕಪಕ್ಕದ ರಾಜ್ಯದ ಗ್ರಾಮಗಳು ಎಲ್ಲರಿಗೂ ಮಾದರಿಯಾಗುವಂತೆ ಬದುಕುತ್ತಿವೆ. ಕಳೆದ 30 ವರ್ಷಗಳಿಂದ ಈ ಹಳ್ಳಿಗಳ ಜನರು ಪರಸ್ಪರ ನೀರಿಗಾಗಿ ಹೊಡೆದಾಡದೆ ಸೌಹಾರ್ದಯುತವಾಗಿ ಬದುಕಿ ನೆಮ್ಮದಿ ಕಂಡಿದ್ದಾರೆ.

ನವದೆಹಲಿ(ಸೆ.28): ನೀರಿಗಾಗಿ ನಿತ್ಯ ಜಗಳವಾಡುವ ದೇಶ, ರಾಜ್ಯ, ಜನರ ಮಧ್ಯೆ ಇಲ್ಲೆರಡು ಅಕ್ಕಪಕ್ಕದ ರಾಜ್ಯದ ಗ್ರಾಮಗಳು ಎಲ್ಲರಿಗೂ ಮಾದರಿಯಾಗುವಂತೆ ಬದುಕುತ್ತಿವೆ. ಕಳೆದ 30 ವರ್ಷಗಳಿಂದ ಈ ಹಳ್ಳಿಗಳ ಜನರು ಪರಸ್ಪರ ನೀರಿಗಾಗಿ ಹೊಡೆದಾಡದೆ ಸೌಹಾರ್ದಯುತವಾಗಿ ಬದುಕಿ ನೆಮ್ಮದಿ ಕಂಡಿದ್ದಾರೆ.

ಅಂದಹಾಗೆ ಈ ಗ್ರಾಮಗಳು ಬೇರೆ ಯಾವುದೂ ಅಲ್ಲ. ಕರ್ನಾಟಕದ ಮನಿಲಾ ಹಾಗೂ ಕೇರಳದ ಪುಟ್ಟಿಗೆ ಗ್ರಾಮಗಳು. ಮೂವತ್ತು ವರ್ಷಗಳ ಹಿಂದೆ ಎರಡೂ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಸರಕಾರಗಳತ್ತ ಬೆರಳು ಮಾಡಿ ತೋರಿಸದೇ ತಕ್ಷಣ ಇವರೇ ಮುಂದಾಗಿ ಮಂಗಳೂರಿನಿಂದ ಸುಮಾರು 60 ಕಿಮೀ. ದೂರದಲ್ಲಿರುವ ಬೇಳೆಕಲ್ಲು ಎನ್ನುವ ಗ್ರಾಮದಲ್ಲಿ ಸಿರಿಯಾ ಎಂಬ ಸಣ್ಣ ನದಿಗೆ ಬ್ಯಾರೇಜ್ ನಿರ್ಮಿಸುತ್ತಾರೆ. ಇದರಿಂದಾಗಿ ಬೇಸಿಗೆಯಲ್ಲಿ ಎದುರಾಗುತ್ತಿದ್ದ ನೀರಿನ ಸಮಸ್ಯೆಗೆ ಮುಕ್ತಿ ದೊರಕಿತು.

ಇದಿಷ್ಟೇ ಅಲ್ಲ. ಬ್ಯಾರೇಜ್ ನಿರ್ಮಾಣವಾದಾಗಿನಿಂದ ಇಲ್ಲಿಯವರೆವಿಗೂ ಯಾವುದೇ ತಕರಾರಿಲ್ಲದೇ ನೀರನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ. ಸುಮಾರು 300 ಎಕರೆ ಕೃಷಿಗೂ ಇದೇ ನೀರು ಆಧಾರವಾಗಿದೆ. ಹೀಗೆ ಸಹಕಾರ ತತ್ವದಲ್ಲಿ ಸಾಗುತ್ತಿರುವ ಗ್ರಾಮಸ್ಥರಿಗೆ ನಂತರದಲ್ಲಿ ಸರಕಾರ, ಸ್ಥಳೀಯ ಸಂಸ್ಥೆಗಳು ಬೆಂಬಲವಾಗಿ ನಿಂತು ಬ್ಯಾರೇಜ್ ದುರಸ್ಥಿ ಕಾರ್ಯವನ್ನು ಮಾಡಿಕೊಟ್ಟಿವೆ. ಒಂದೇ ರಾಜ್ಯದ ಎರಡು ಗ್ರಾಮಗಳಲ್ಲಿ ಈ ರೀತಿಯ ಕಾರ್ಯವಾಗಿದ್ದರೆ ಪರವಾಗಿಲ್ಲ. ಆದರೆ ಎರಡು ಬೇರೆ ಬೇರೆ ರಾಜ್ಯಗಳ ಗ್ರಾಮಗಳಲ್ಲಿ ಈ ರೀತಿಯ ಸೌಹಾರ್ದ ಬಾಂಧವ್ಯ ಮುಂದುವರೆದಿರುವುದು ವಿಶೇಷವಾಗಿದೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್ ರೀತಿಯಲ್ಲೇ ಮತ್ತೊಂದು ಉಗ್ರ ಕೃತ್ಯ, ಗುಂಡಿನ ದಾಳಿಯಲ್ಲಿ 10 ಸಾವು, ಹಲವರು ಗಂಭೀರ
ಐಟಿ ಪಾರ್ಕ್ ಗುತ್ತಿಗೆ 30 ವರ್ಷ, ವಿಸ್ತರಣೆಗೂ ಅವಕಾಶ: ಸಚಿವ ಪ್ರಿಯಾಂಕ್‌ ಖರ್ಗೆ