ಒಂದು ದೇಶ, ಒಂದೇ ಭಾಷೆ: ಹಿಂದಿ ರಾಷ್ಟ್ರೀಯ ಭಾಷೆಯಾಗಿಸಲು ಶಾ ಮನವಿ

Published : Sep 14, 2019, 03:01 PM ISTUpdated : Sep 14, 2019, 04:08 PM IST
ಒಂದು ದೇಶ, ಒಂದೇ ಭಾಷೆ: ಹಿಂದಿ ರಾಷ್ಟ್ರೀಯ ಭಾಷೆಯಾಗಿಸಲು ಶಾ ಮನವಿ

ಸಾರಾಂಶ

ಒಂದು ದೇಶ, ಒಂದೇ ಭಾಷೆ| ಹಿಂದಿ ದಿನದಂದು ಗೃಹ ಸಚಿವ ಅಮಿತ್ ಶಾ ಮನವಿ| ಮಾತೃ ಭಾಷೆ ಬಳಕೆ ಹೆಚ್ಚು ಮಾಡಿ, ಆದ್ರೆ ಹಿಂದಿ ಬಳಕೆಯನ್ನೂ ವೃದ್ಧಿಸಿ

ನವದೆಹಲಿ[ಸೆ.14]: ಹಿಂದಿ ದಿನಾಚರಣೆಯ ಪ್ರಯುಕ್ತ ಗೃಹ ಸಚಿವ ಅಮಿತ್ ಶಾ ಹಿಂದಿ ಮಾಧ್ಯಮದ ಮೂಲಕ ಇಡೀ ದೇಶವನ್ನು ಒಂದಾಗಿಸುವ ಮನವಿ ಮಾಡಿದ್ದಾರೆ. 'ಮಾತೃಭಾಷೆ ಬಳಕೆಯನ್ನು ಹೆಚ್ಚಿಸಿ, ಇದರೊಂದಿಗೆ ಹಿಂದೀ ಭಾಷೆ ಪ್ರಯೋಗಿಸಿ ದೇಶದ ಒಂದೇ ಭಾಷೆ ಎಂಬ ಗಾಂಧೀಜಿ ಹಾಗೂ ಸರ್ದಾರ್ ಪಟೇಲ್ ಕನಸು ನನಸಾಗಿಸಿ' ಎಂದು ಮನವಿ ಮಾಡಿಕೊಂಡಿದ್ದಾರೆ.

ಹಿಂದಿ ದಿನ ಪ್ರಯುಕ್ತ ಟ್ವೀಟ್ ಮಾಡಿರುವ ಗೃಹ ಸಚಿವ ಅಮಿತ್ ಶಾ 'ಇಂದು ಹಿಂದಿ ದಿನದ ಪ್ರಯುಕ್ತ ನಾನು ಇಡೀ ದೇಶದ ನಾಗರಿಕರಲ್ಲಿ, ನಿಮ್ಮ ಮಾತೃ ಭಾಷೆ ಬಳಕೆಯನ್ನು ಹೆಚ್ಚಿಸಿ, ಇದರೊಂದಿಗೆ ಇದರೊಂದಿಗೆ ಹಿಂದೀ ಭಾಷೆ ಪ್ರಯೋಗಿಸಿ ದೇಶದ ಒಂದೇ ಭಾಷೆ ಎಂಬ ಗಾಂಧೀಜಿ ಹಾಗೂ ಸರ್ದಾರ್ ಪಟೇಲ್ ಕನಸು ನನಸಾಗಿಸಿ' ಎಂದಿದ್ದಾರೆ

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ 'ವಿಭಿನ್ನ ಭಾಷೆ ನಮ್ಮ ದೇಶದ ಶಕ್ತಿ. ಆದರೆ ವಿದೆಶೀ ಭಾಷೆಗೆ ಇಲ್ಲಿ ಯಾವುದೇ ಕಿಮ್ಮತ್ತು ಕೊಡಬಾರದೆಂದು ನಮ್ಮ ಸ್ವಾತಂತ್ರ್ಯ ಸೇನಾನಿಗಳು ಹಿಂದಿಯನ್ನು 'ರಾಷ್ಟ್ರ ಭಾಷೆ'ಯಾಗಿ ನೋಡಲಾರಂಭಿಸಿದರು. ನಮ್ಮ ದೇಶದಲ್ಲಿ ವಿಭಿನ್ನ ಭಾಷೆಗಳಿವೆ. ಇವುಗಳಿಗೆ ತಮ್ಮದೇ ಆದ ಮಹತ್ವವಿದೆ. ಆದರೆ ವಿಶ್ವದಲ್ಲಿ ಗುರುತಿಸಿಕೊಳ್ಳಬೇಕಾದರೆ ದೇಶಕ್ಕೊಂದೇ ಭಾಷೆ ಇರುವುದು ಅಗತ್ಯ' ಎಂದಿದ್ದಾರೆ.

ಅಲ್ಲದೇ 'ಇಂದು ದೇಶವನ್ನು ಏಕತೆಯ ಬಂಧದಲ್ಲಿ ಕಟ್ಟಿ ಹಾಕುವ ಕೆಲಸ ಮಾಡುತ್ತದೆ ಎಂದರೆ ಅದು ಅತ್ಯಂತ ಹೆಚ್ಚು ಮಂದಿ ಬಳಸುವ ಹಿಂದೀ ಭಾಷೆಯಾಗಿದೆ' ಎನ್ನುವ ಮೂಲಕ ಒಂದೇ ದೇಶ, ಒಂದೇ ಭಾಷೆ ಎಂಬ ಸಂದೇಶ ಸಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!